ಶೃಂಗೇರಿ: ಚಾಲಕನ ನಿಯಂತ್ರಣ ತಪ್ಪಿ ಆಲ್ಟೋ ಕಾರೊಂದು ರಸ್ತೆ ಪಕ್ಕದ ಹೊಂಡಕ್ಕೆ ಬಿದ್ದಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ನೆಮ್ಮಾರು ಸಮೀಪ ನಡೆದಿದೆ. ರಸ್ತೆಯ ತಿರುವಿನಲ್ಲಿ ಈ ಅಪಘಾತ ಸಂಭವಿಸಿದ್ದು ಕಾರು ಸಂಪೂರ್ಣವಾಗಿ ಗುಂಡಿಯೊಳಗೆ ಬಿದ್ದಿದೆ. ಆದರೆ ಯಾರಿಗೆ ಏನು ಆಗಿದೆ ಹಾಗೆ ಇದು ಯಾರಿಗೆ ಸೇರಿದ ಕಾರಿನ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ
ಚಾಲಕನ ಅಜಾಗರುಕತೆಯ ಚಾಲನೆಯಿಂದಾಗಿ ಈ ಘಟನೆ ನಡೆದಿದೆಯೋ ಅಥವಾ ತಾಂತ್ರಿಕ ದೋಷದಿಂದ ಆಗಿದರ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಹೊರಬಂದಿಲ್ಲ.
