Sunday, April 19, 2026
Homeಕ್ರೈಮ್ಕಳಸ: ಕಾಡುಕೋಣ ದಾಳಿಗೆ ಯುವಕ ಬಲಿ!

ಕಳಸ: ಕಾಡುಕೋಣ ದಾಳಿಗೆ ಯುವಕ ಬಲಿ!

ಕಳಸ: ಕಾಫಿನಾಡಲ್ಲಿ ನಿಲ್ಲದ ಕಾಡುಪ್ರಾಣಿ-ಮಾನವ ಸಂಘರ್ಷ ಮುಂದುವರೆದಿದ್ದು ಕಳಸ ತಾಲ್ಲೂಕಿನ ಮರಸಣಿಗೆ ಗ್ರಾಮದ ಮೈದಾಡಿ ಯಮಕೊಂಡ ಎಸ್ಟೇಟ್‌ನಲ್ಲಿ ಕಾಡುಕೋಣ ದಾಳಿಗೆ ತೋಟ ಕಾರ್ಮಿಕ ಚೇತನ್(30) ಮೃತಪಟ್ಟಿದ್ದಾರೆ.

ಹೊರನಾಡು ಬಳಿಯ ಕವನಹಳ್ಳದ ಚೇತನ್. ಎದೆ ಎತ್ತರಕ್ಕೆ ಬೆಳೆದಿದ್ದ ಮಗನ ಕಳ್ಕೊಂಡು ತಾಯಿದ ಗೋಳಾಟ ಮಾತ್ರ ನೋಡುವವರ ಮನ ಮರಗುತ್ತಿತ್ತು. ಘಟನೆ ಸಂಬಂದ ಕಳಸ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 ಕಾಫಿನಾಡಿನಲ್ಲಿ ಇತ್ತೀಚಿಗೆ ಕಾಡಾನೆಗಳ ಹಾವಳಿ ಹೆಚ್ಚಿತ್ತು. ಈಗ ಕಾಡಾನೆ ಜೊತೆ ಕಾಡುಕೋಣಗಳ ಹಾವಳಿಯೂ ಹೆಚ್ಚಿದೆ. ಹಾಗಾಗಿ, ಸ್ಥಳೀಯರು ಅಧಿಕಾರಿಗಳು ಕಾಡುಕೋಣಗಳ ಬಗ್ಗೆ ಸೂಕ್ತ ಕ್ರಮಕೈಗೊಳ್ಳಬೇಕು. ಈ ರೀತಿಯ ಪ್ರಕರಣ ಇನ್ನೊಂದು ನಡೆದರೆ ಅರಣ್ಯ ಇಲಾಖೆಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!