Sunday, April 19, 2026
Homeಕ್ರೈಮ್ಎನ್‌ಆರ್‌ ಪುರ: ಸಿದ್ದರಾಮಯ್ಯ ಸೇತುವೆ ಬಳಿ ಈಜಲು ತೆರಳಿದ್ದ ಮೂವರಲ್ಲಿ ಓರ್ವ ನಾಪತ್ತೆ: ಶೋಧ ಕಾರ್ಯ

ಎನ್‌ಆರ್‌ ಪುರ: ಸಿದ್ದರಾಮಯ್ಯ ಸೇತುವೆ ಬಳಿ ಈಜಲು ತೆರಳಿದ್ದ ಮೂವರಲ್ಲಿ ಓರ್ವ ನಾಪತ್ತೆ: ಶೋಧ ಕಾರ್ಯ

ಎನ್‌ಆರ್‌ ಪುರ: ಸಿದ್ದರಾಮಯ್ಯ ಸೇತುವೆ ಬಳಿ ಈಜಲು ತೆರಳಿದ್ದ ಮೂವರಲ್ಲಿ ಓರ್ವ ನಾಪತ್ತೆಯಾಗಿದ್ದು, ನೀರಿನಲ್ಲಿ ಮುಳುಗಿ ಸಾವನಪ್ಪಿದ ಶಂಕೆ ವ್ಯಕ್ತವಾಗಿದೆ.

ಸಿದ್ದರಾಮಯ್ಯ ಸೇತುವೆ ಕೆಳಭಾಗದ ಭದ್ರಾ ನದಿಯ ಹಿನ್ನೀರಿನಲ್ಲಿ ಎನ್.ಆರ್.ಪುರದ ಸಿಗುವಾನಿ ಗ್ರಾಮದ ಮೂವರು ಯುವಕರು ಈಜಲು ತೆರಳಿದ್ದರು. ಇಬ್ಬರು ಮೇಲೆ ಬಂದರೂ ಮತ್ತೋರ್ವ ಮಾತ್ರ ನಾಪತ್ತೆಯಾಗಿದ್ದು, ಆತನ ಸುಳಿವು ಸಿಕ್ಕಿಲ್ಲ. ಆತ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರು ಶಂಕೆ ವ್ಯಕ್ತವಾಗಿದ್ದು, ರಕ್ಷಣಾ ತಂಡಗಳು ಶವಕ್ಕಾಗಿ ಹುಡುಕಾಟ ನಡೆಸುತ್ತಿವೆ. ಅಗ್ನಿಶಾಮಕದಳದ ಸಿಬ್ಬಂದಿ, ಸ್ಥಳೀಯರು ಹಾಗೂ ಪೊಲೀಸರಿಂದ ಶೋಧ ಕಾರ್ಯ ನಡೆಸುತ್ತಿದ್ದಾರೆ.

ಭದ್ರಾ ನದಿಗೆ ಅಡ್ಡಲಾಗಿ ಸಿದ್ದರಾಮಯ್ಯ ಸೇತುವೆ ಕಟ್ಟಲಾಗಿದೆ. ಕಳೆದ ಭಾನುವಾರವಷ್ಟೆ ಸಿಎಂ ಸಿದ್ದರಾಮಯ್ಯ ಅವರು ಈ ಸೇತುವೆ ಉದ್ಘಾಟಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!