ಮೂಡಿಗೆರೆ: ಇಂಡಿಯನ್ ಪ್ರೀಮಿಯರ್ ಲೀಗ್ ಮಾದರಿಯ ಬಿಪಿಎಲ್ ಬೈದುವಳ್ಳಿ ಪ್ರೀಮಿಯರ್ ಲೀಗ್ ಕ್ರಿಕೆಟ್ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಯಿತು
ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಕಾಫಿ ಬೆಳೆಗಾರರಾದ ರವೀಂದ್ರ ಬಾಳೆಗದ್ದೆ ಮಾತನಾಡಿ ಕ್ರೀಡೆಗಳು ಯುವಕರ ದೈಹಿಕ ಹಾಗೂ ಮಾನಸಿಕ ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ ಎಂದು ಹೇಳಿದರು.

ಮೂಡಿಗೆರೆ ತಾಲ್ಲೂಕಿನ ಗೋಣಿಬೀಡು ಹೋಬಳಿ ಬೈದುವಳ್ಳಿಯ ಕ್ರೀಡಾಂಗಣದಲ್ಲಿ ದಿಣ್ಣೆಕೆರೆ, ಹೆಮ್ಮದಿ, ಬೈದುವಳ್ಳಿ ಗ್ರಾಮಗಳ ಸಂಯುಕ್ತಶ್ರಯದಲ್ಲಿ ಆಯೋಜಿಸಿರುವ ಮೂರು ದಿನಗಳ ಟೆನ್ನಿಸ್ ಬಾಲ್ ಕ್ರಿಕೆಟ್ ಲೀಗ್ ಬಿಪಿಎಲ್ ಪ್ರಿಮಿಯರ್ ಲೀಗ್ ಕ್ರಿಕೆಟ್ ಟೂರ್ನಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಕ್ರಿಕೆಟ್ ಆಟವಲ್ಲದೆ ಗ್ರಾಮೀಣ ಕ್ರೀಡೆಗಳು ನಮ್ಮ ಸಂಸ್ಕೃತಿ ಮತ್ತು ಪರಂಪರೆಯ ಅವಿಭಾಜ್ಯ ಅಂಗವಾಗಿವೆ. ಇವುಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಯುವಕರ ಮೇಲಿದೆ ಎಂದರು.
ಇತ್ತೀಚಿನ ದಿನಗಳಲ್ಲಿ ಕ್ರಿಕೆಟ್ ಕ್ರೀಡೆಗೆ ಯುವಕರಲ್ಲಿ ಹೆಚ್ಚು ಒಲವು ಹೆಚ್ಚುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿಯೂ ಲೀಗ್ ಮಾದರಿಯ ಪಂದ್ಯಗಳು ನಡೆಯುತ್ತಿರುವುದು ಕ್ರೀಡೆಗಳ ಅಭಿವೃದ್ಧಿಗೆ ಉತ್ತಮ ಸೂಚನೆ ಆಗಿದೆ ಅಲ್ಲದೆ ಸ್ಥಳೀಯ ಭಾಗದ ಪ್ರತಿಭಾವಂತ ಆಟಗಾರರನ್ನು ಸಮಾಜಕ್ಕೆ ಪರಿಚಯಿಸುವುದರ ಜೊತೆಗೆ ದೊಡ್ಡ ಮಟ್ಟದ ಕ್ರೀಡಾಕೂಟ ದಲ್ಲಿ ತಾಲೂಕಿನ ಆಟಗಾರರು ಭಾಗವಹಿಸಲು ಇಂತಹ ಲೀಗ್ ಸಹಕರಿಯಾಗಲಿದೆ ಎಂದು ಹೇಳಿದರು. ಯುವಕರು ಕ್ರಿಕೆಟ್ ಜೊತೆಗೆ ಸ್ಥಳೀಯ ಕ್ರೀಡೆಗಳಿಗೂ ಸಮಾನ ಮಹತ್ವ ನೀಡಿ, ಅವುಗಳನ್ನು ಜೀವಂತವಾಗಿಡಬೇಕು ಎಂದರು.
ಕ್ರೀಡಾಕೂಟಕ್ಕೆ ಉದ್ದೇಶಿಸಿ ಮಾತನಾಡಿದ ಉದ್ಯಮಿ ಬ್ಲಾನಿ ರೋಡರಿಗಸ್ ಕ್ರೀಡೆ ಸ್ನೇಹ ವೃದ್ಧಿಗೆ ಹಾಗೂ ಮಾನಸಿಕ ಸ್ಥಿರತೆ ಕಾಪಾಡಲು ಸಾಕ್ಷಿಯಾಗಿದೆ ಯುವಕರೊಂದಿಗೆ ಕೆಲಕಾಲ ಆಟವಾಡಿ ಹಳೇ ನೆನಪುಗಳನ್ನು ಹಂಚಿಕೊಂಡು ಯುವಕರು ದುಶ್ಚಟಕ್ಕೆ ಬಲಿಯಾಗದೆ ಸಮಾಜದಲ್ಲಿ ಮಾದರಿಯಾಗಿ ಬದುಕುವಂತೆ ಕಿವಿ ಮಾತು ಹೇಳಿ ಕ್ರೀಡಾಕೂಟಕ್ಕೆ ಶುಭಾಶಯ ತಿಳಿಸಿದರು
ಈ ಸಂದರ್ಭದಲ್ಲಿ ರಾಮಚಂದ್ರ, ಸುಮಿತ್ರೆಗೌಡ,ಚಿರಂಜೀವಿ,
ರಾಜು ಬಿ ಬಿ,ರಾಘವೇಂದ್ರ,ಸೇರಿದಂತೆ ಕ್ರೀಡಾಕೂಟದ ಆಯೋಜಕರು ಗ್ರಾಮಸ್ಥರು ಉಪಸ್ಥಿತರಿದ್ದು,
ವರದಿ-ಪುನೀತ್ ಕಡಿದಾಳು
9483811948
