ಚಿಕ್ಕಮಗಳೂರು : ಮುಳ್ಳಯ್ಯನಗಿರಿ ತಪ್ಪಲಿನಲ್ಲಿ ಅಕ್ರಮವಾಗಿ ಅದಿರು ಸಾಗಾಣೆ ಪತ್ತೆಯಾಗಿದ್ದು ಪರಿಸರ ಸೂಕ್ಷ್ಮ ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿ ಹಿಟಾಚಿ-ಜೆಸಿಬಿ ಘರ್ಜನೆ ಮಾತ್ರ ಜೋರಾಗಿದೆ.ಇದಕ್ಕಾಗಿ ಪರಿಸರವಾದಿಗಳು ಆಗ್ರಹಿಸಿದ್ದಾರೆ.
ಹೌದು .. ಮುಳ್ಳಯ್ಯನಗಿರಿ-ಬಾಬಾಬುಡನ್ ಗಿರಿ ಶ್ರೇಣಿಯಲ್ಲಿ ಅಕ್ರಮ ರಸ್ತೆ ನಿರ್ಮಾಣ ಆರೋಪ ಮಾಡುತ್ತಿರುವ ಆರೋಪ ಕೇಳಿಬಂದಿದ್ದು ಶೋಲಾಕಾಡು, ಹುಲ್ಲುಗಾವಲು ಪ್ರದೇಶಗಳಲ್ಲಿ ಜೆಸಿಬಿ-ಹಿಟಾಚಿ ಬಳಸಿ ರಸ್ತೆ ನಿರ್ಮಾಣ ಮಾಡಲಾಗುತ್ತಿದ್ದು ಇದು ಪರಿಸರವಾದಿಗಳು ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಳ್ಳಯ್ಯನಗಿರಿ ಕರ್ನಾಟಕದ ಅತ್ಯಂತ ಎತ್ತರದ ಪ್ರದೇಶ ಗುಡ್ಡ ಬಗೆದು ಮಣ್ಣು, ಅದಿರು ಸಾಗಾಟ ನಡೆಯುತ್ತಿರೋ ಆರೋಪ ಕೇಳಿಬಂದಿದ್ದು ರೆಸಾರ್ಟ್, ಹೋಮ್‌ಸ್ಟೇ ನಿರ್ಮಾಣಕ್ಕಾಗಿ ಹೊಸ ರಸ್ತೆಗಳನ್ನು ನಿರ್ಮಿಸುತ್ತಿರುವುದು ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಅರಣ್ಯೇತರ ಚಟುವಟಿಕೆ ಹಾಗೆ ಪರಿಸರ ಸೂಕ್ಷ್ಮ ವಲಯದಲ್ಲಿ ಅಕ್ರಮ ರಸ್ತೆ, ಅರಣ್ಯ ಇಲಾಖೆ ಗಾಢ ನಿದ್ರೆಯಲ್ಲಿ ಎಂದು ಪರಿಸರವಾದಿಗಳು ಆರೋಪ ಮಾಡುತ್ತಿದ್ದಾರೆ.
ಪ್ರಸ್ತಾಪಿತ ಮುಳ್ಳಯ್ಯನಗಿರಿ ಸಂರಕ್ಷಣಾ ಮೀಸಲು ವ್ಯಾಪ್ತಿಯಲ್ಲೇ ಅಕ್ರಮ ಚಟುವಟಿಕೆ ನಡೆಯುತ್ತಿದ್ದು ಅವೈಜ್ಞಾನಿಕ ರಸ್ತೆ ನಿರ್ಮಾಣದಿಂದ ಮಳೆಗಾಲದಲ್ಲಿ ಭೂ ಕುಸಿತದ ಅತಂಕ ಹೆಚ್ಚಾಗಿದೆ. ಮೃದುವಾದ ಮಣ್ಣಿನ ಪ್ರದೇಶದಲ್ಲಿ ಭಾರೀ ಯಂತ್ರಗಳ ಬಳಕೆಗೆ ತೀವ್ರ ವಿರೋಧ ವ್ಯಕ್ತವಾಗಿದೆ.
ಮಣ್ಣು ಸಾಗಣೆ ಬಗ್ಗೆ ಮೈನ್ಸ್ ಮತ್ತು ಜಿಯಾಲಜಿ ಇಲಾಖೆಯಿಂದ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ, ಜಿಲ್ಲಾಡಳಿತ, ಅರಣ್ಯ ಇಲಾಖೆ ಕಣ್ಮುಚ್ಚಿ ಕುಳಿತಿವೆ. ಅಕ್ರಮ ರಸ್ತೆ ನಿರ್ಮಾಣ ಮತ್ತು ಗುಡ್ಡ ಬಗೆಯುವಿಕೆ ತಕ್ಷಣ ನಿಲ್ಲಿಸಬೇಕು ಹಾಗೆ ಯಂತ್ರಗಳನ್ನು ವಶಕ್ಕೆ ಪಡೆದು ಅರಣ್ಯ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಲು ಪರಿಸರವಾದಿಗಳು ಆಗ್ರಹಿಸಿದ್ದಾರೆ.
