Wednesday, August 12, 2026
Homeಕ್ರೈಮ್ಎನ್.‌ ಆರ್‌. ಪುರ: ಅಡಿಕೆ ಸಾಗಾಟ ವಾಹನ ಅಡ್ಡಗಟ್ಟಿ ದರೋಡೆ ಕೇಸ್:‌ ಆರೋಪಿಗಳ ಬಂಧನ!

ಎನ್.‌ ಆರ್‌. ಪುರ: ಅಡಿಕೆ ಸಾಗಾಟ ವಾಹನ ಅಡ್ಡಗಟ್ಟಿ ದರೋಡೆ ಕೇಸ್:‌ ಆರೋಪಿಗಳ ಬಂಧನ!

Telegram Group
Join Now

ಎನ್.‌ ಆರ್‌. ಪುರ: ಅಡಿಕೆ ಸಾಗಿಸುತ್ತಿದ್ದದ ವೇಳೆ ವಾ‌ಹನವನ್ನು ಅಡ್ಡಗಟ್ಟಿ ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಚನ್ನಗಿರಿ ಮೂಲದವನ್ನ ಬಂಧಿಸಿಲಾಗಿದೆ.

ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ನರಸಿಂಹರಾಜಪುರ ಮಧ್ಯೆ ಅರೆಹಳ್ಳ ಸಮೀಪ ಸುಮಾರು 2.5 ಲಕ್ಷ ಮೌಲ್ಯದ ಹಸಿ ಅಡಿಕೆಯನ್ನ ಸಾಗಿಸುತ್ತಿದ್ದ ವೇಳೆ ವಾ‌ಹನವನ್ನು ಅಡ್ಡಗಟ್ಟಿ ಕುದುರೆ ಗುಂಡಿ ಸಮೀಪ ತೆಗೆದುಕೊಂಡು ಹೋಗಿ ಕಳೆದ ಶನಿವಾರ ದರೋಡೆ ಮಾಡಿದ್ದರು.

ಪ್ರಕರಣಕ್ಕೆ ಸಂಬಂಧಪಟ್ಟಂತೆ ಎನ್‌ ಆರ್‌ ಪುರ ಪೊಲೀಸರಿಂದ ಆರೋಪಿಗಳನ್ನ ಬಂಧಿಸಲಾಗಿದೆ.

ರವಿ ಅವರು ಕಾರ್‌ಗದ್ದೆಯ ವ್ಯಕ್ತಿಯೊಬ್ಬರಿಂದ 67 ಚೀಲ ಹಸಿ ಅಡಿಕೆಯನ್ನು ಖರೀದಿಸಿ, ಚಾಲಕನೊಂದಿಗೆ ಪಿಕಪ್ ವಾಹನದಲ್ಲಿ ಭದ್ರಾವತಿ ಕಡೆಗೆ ತೆರಳುತ್ತಿದ್ದರು. ಇವರನ್ನು ಬಾಳೆಹೊನ್ನೂರಿನಿಂದಲೇ ಹಿಂಬಾಲಿಸಿಕೊಂಡು ಬಂದ ದರೋಡೆಕೋರರ ತಂಡ, ಅಳೇಹಳ್ಳಿ ಬಳಿ ವಾಹನವನ್ನು ಅಡ್ಡಗಟ್ಟಿದೆ. ಪಿಕಪ್ ಮತ್ತು ಬೈಕ್‌ನಲ್ಲಿ ಬಂದ ಐದಾರು ಮಂದಿ ತಂಡವು ಕಬ್ಬಿಣದ ಸಲಾಕೆ ಹಾಗೂ ಕತ್ತಿಗಳಿಂದ ದಾಳಿ ನಡೆಸಿ, ರವಿ ಅವರ ವಾಹನದ ಗಾಜು ಒಡೆದು ಒಳಗೆ ನುಗ್ಗಿದ್ದಾರೆ. ತಪ್ಪಿಸಿಕೊಳ್ಳಲು ಯತ್ನಿಸಿದ ರವಿ ಅವರ ಮೇಲೆ ಹಲ್ಲೆ ನಡೆಸಿ, ಅವರ ಜೇಬಿನಲ್ಲಿದ್ದ 29 ಸಾವಿರ ರೂ. ನಗದು ಹಾಗೂ ಮೊಬೈಲ್ ಫೋನ್‌ಗಳನ್ನು ಕಸಿದುಕೊಂಡಿದ್ದರು.


RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments