Wednesday, August 12, 2026
Homeಆರೋಗ್ಯEarly Morning Yoga: ದಿನವಿಡೀ ಲವಲವಿಕೆಯಿಂದ ಇರಲು ಇಲ್ಲಿವೆ ಸರಳ ಯೋಗಾಸನಗಳು!

Early Morning Yoga: ದಿನವಿಡೀ ಲವಲವಿಕೆಯಿಂದ ಇರಲು ಇಲ್ಲಿವೆ ಸರಳ ಯೋಗಾಸನಗಳು!

Telegram Group
Join Now

ಸೂರ್ಯೋದಯಕ್ಕೆ ಎರಡು ಗಂಟೆ ಮೊದಲು ಅಥವಾ ನಂತರದ ಸಮಯವನ್ನು ಯೋಗಕ್ಕೆ ಅತ್ಯಂತ ಪ್ರಶಸ್ತ ಎಂದು ಪರಿಗಣಿಸಲಾಗುತ್ತದೆ. ಈ ಸಮಯದಲ್ಲಿ ‘ಸಾತ್ವಿಕ ಶಕ್ತಿ’ ಹೆಚ್ಚಾಗಿರುವುದರಿಂದ ಮನಸ್ಸು ಮತ್ತು ಆತ್ಮ ಪ್ರಕೃತಿಯೊಂದಿಗೆ ಸುಲಭವಾಗಿ ಒಂದಾಗುತ್ತವೆ. ಈ ಕೆಳಕಂಡ ಸುಲಭ ಆಸನಗಳನ್ನು ಮಾಡುವುದರಿಂದ ದಿನವಿಡೀ ಲವಲವಿಕೆಯಿಂದ ಇರಬಹುದು

ಮುಂಜಾನೆ ಮಾಡಬಹುದಾದ ಸುಲಭ ಯೋಗಾಸನಗಳು

  1. ವಾರ್ಮ್ ಅಪ್ (Warm-up): ಯಾವುದೇ ಆಸನ ಮಾಡುವ ಮೊದಲು ಕುತ್ತಿಗೆ, ಭುಜ, ಮಣಿಕಟ್ಟು ಮತ್ತು ಮೊಣಕಾಲುಗಳನ್ನು ಪ್ರದಕ್ಷಿಣಾಕಾರವಾಗಿ ನಿಧಾನವಾಗಿ ತಿರುಗಿಸಿ ಸ್ನಾಯುಗಳನ್ನು ಸಡಿಲಗೊಳಿಸಿ.
  2. ತಾಡಾಸನ (Mountain Pose): ನೆಟ್ಟಗೆ ನಿಂತು, ಕೈಗಳನ್ನು ಮೇಲೆತ್ತಿ ಬೆರಳುಗಳನ್ನು ಜೋಡಿಸಿ, ಅಂಗೈ ಆಕಾಶದ ಕಡೆಗಿರಲಿ. ಈಗ ನಿಧಾನವಾಗಿ ಹಿಮ್ಮಡಿಯನ್ನು ಮೇಲೆತ್ತಿ ಕಾಲ್ಬೆರಳುಗಳ ಮೇಲೆ ನಿಲ್ಲಿ. ಇದು ಇಡೀ ದೇಹಕ್ಕೆ ಸ್ಟ್ರೆಚ್ ನೀಡುತ್ತದೆ.
  3. ವೃಕ್ಷಾಸನ (Tree Pose): ಒಂದು ಕಾಲಿನ ಮೇಲೆ ಸಮತೋಲನ ಕಾಯ್ದುಕೊಂಡು, ಮತ್ತೊಂದು ಕಾಲಿನ ಪಾದವನ್ನು ಇನ್ನೊಂದು ಕಾಲಿನ ತೊಡೆಯ ಮೇಲಿಡಿ. ಕೈಗಳನ್ನು ನಮಸ್ಕಾರ ಮುದ್ರೆಯಲ್ಲಿ ಎದೆಯ ಬಳಿ ಅಥವಾ ತಲೆಯ ಮೇಲೆ ಹಿಡಿಯಿರಿ. ಇದು ಏಕಾಗ್ರತೆಯನ್ನು ಹೆಚ್ಚಿಸುತ್ತದೆ.
  4. ಮಾರ್ಜಾರಾಸನ (Cat Pose): ಮಂಡಿಯೂರಿ ಕುಳಿತು, ಕೈಗಳನ್ನು ನೆಲದ ಮೇಲಿಟ್ಟು ಮೇಜಿನ ಆಕೃತಿಯಲ್ಲಿ ಬನ್ನಿ. ಉಸಿರು ತೆಗೆದುಕೊಳ್ಳುತ್ತಾ ತಲೆ ಮೇಲೆತ್ತಿ ಬೆನ್ನನ್ನು ಕೆಳಕ್ಕೆ ಬಾಗಿಸಿ, ಉಸಿರು ಬಿಡುತ್ತಾ ಗಲ್ಲವನ್ನು ಎದೆಗೆ ಹಚ್ಚಿ ಬೆನ್ನನ್ನು ಮೇಲೆಕ್ಕೆ ಕಮಾನಿನಂತೆ ಮಾಡಿ. ಇದು ಬೆನ್ನುಮೂಳೆಗೆ ತುಂಬಾ ಒಳ್ಳೆಯದು.
  5. ಉಷ್ಟ್ರಾಸನ (Camel Pose): ಮಂಡಿಯೂರಿ ಕುಳಿತು ನಿಧಾನವಾಗಿ ಹಿಂದೆ ಬಾಗಿ ಎರಡೂ ಕೈಗಳಿಂದ ಹಿಮ್ಮಡಿಯನ್ನು ಹಿಡಿಯಿರಿ. ಇದು ಎದೆಯ ಭಾಗವನ್ನು ವಿಸ್ತರಿಸಲು ಮತ್ತು ಉಸಿರಾಟದ ಸಾಮರ್ಥ್ಯ ಹೆಚ್ಚಿಸಲು ಸಹಕಾರಿ.
  6. ಶಶಂಕಾಸನ (Rabbit Pose): ವಜ್ರಾಸನದಲ್ಲಿ ಕುಳಿತು ನಿಧಾನವಾಗಿ ಮುಂದೆ ಬಾಗಿ ಹಣೆ ನೆಲಕ್ಕೆ ತಾಗಿಸಿ. ಕೈಗಳನ್ನು ಮುಂದೆ ಚಾಚಿ. ಇದು ಮನಸ್ಸನ್ನು ಶಾಂತಗೊಳಿಸಲು ಅತ್ಯುತ್ತಮ ಆಸನ.
  7. ಸುಖಾಸನ ಮತ್ತು ಪ್ರಾಣಾಯಾಮ: ಆರಾಮವಾಗಿ ಸುಖಾಸನದಲ್ಲಿ ಕುಳಿತು ಕಣ್ಣು ಮುಚ್ಚಿ ಉಸಿರಾಟದ ಮೇಲೆ ಗಮನ ಹರಿಸಿ. ಅನುಲೋಮ-ವಿಲೋಮ ಅಥವಾ ಭ್ರಾಮರಿ ಪ್ರಾಣಾಯಾಮವನ್ನು ಅಭ್ಯಾಸ ಮಾಡಿ.
  8. ಓಂಕಾರ ಪಠಣ: ಯೋಗಾಭ್ಯಾಸದ ಕೊನೆಯಲ್ಲಿ 11 ಅಥವಾ 21 ಬಾರಿ ‘ಓಂ’ ಜಪ ಮಾಡುವುದರಿಂದ ಮನಸ್ಸು ಪ್ರಶಾಂತವಾಗುತ್ತದೆ ಮತ್ತು ಯೋಗದ ಸಂಪೂರ್ಣ ಲಾಭ ದೇಹಕ್ಕೆ ಸಿಗುತ್ತದೆ.

ಬೆಳಗಿನ ಯೋಗದಿಂದ ಆಗುವ 5 ಪ್ರಮುಖ ಲಾಭಗಳು
ಧನಾತ್ಮಕ ಆರಂಭ: ಬೆಳಗಿನ ಯೋಗ ಮತ್ತು ಧ್ಯಾನವು ಮೆದುಳನ್ನು ಉತ್ತೇಜಿಸಿ ಹೊಸ ಆಲೋಚನೆಗಳಿಗೆ ನಾಂದಿ ಹಾಡುತ್ತದೆ.
ಸಮಯ ನಿರ್ವಹಣೆ: ಬೆಳಗ್ಗೆಯೇ ವ್ಯಾಯಾಮ ಮುಗಿಸುವುದರಿಂದ ದಿನದ ಉಳಿದ ಕೆಲಸಗಳಿಗೆ ಹೆಚ್ಚಿನ ಸಮಯ ಸಿಗುತ್ತದೆ ಹಾಗೂ ಕೆಲಸದ ನಡುವೆ ಉಂಟಾಗುವ ಬೆನ್ನು ಅಥವಾ ಮೈಕೈ ನೋವು ದೂರವಾಗುತ್ತದೆ.
ಪ್ರಾಣಶಕ್ತಿಯ ಹೆಚ್ಚಳ: ಪ್ರಾಣಾಯಾಮ ಮಾಡುವುದರಿಂದ ದೇಹದಲ್ಲಿ ಆಮ್ಲಜನಕದ ಸಂಚಾರ ಸುಧಾರಿಸಿ, ಜೀವಶಕ್ತಿ ಅಥವಾ ‘ಪ್ರಾಣ’ ಹೆಚ್ಚಾಗುತ್ತದೆ. ಇದು ಒತ್ತಡವನ್ನು ಕಡಿಮೆ ಮಾಡುತ್ತದೆ.
ಹಾರ್ಮೋನುಗಳ ಸಮತೋಲನ: ಯೋಗವು ದೇಹದ ಎಂಡೋಕ್ರೈನ್ ವ್ಯವಸ್ಥೆಯನ್ನು ಉತ್ತೇಜಿಸಿ ಹಾರ್ಮೋನುಗಳನ್ನು ಸಮತೋಲನದಲ್ಲಿಡುತ್ತದೆ. ಇದು ಜೀರ್ಣಕ್ರಿಯೆ ಮತ್ತು ಚಯಾಪಚಯ ಕ್ರಿಯೆಯನ್ನು (Metabolism) ಉತ್ತೇಜಿಸುತ್ತದೆ.
ದೇಹದ ಫ್ಲೆಕ್ಸಿಬಲಿಟಿ ಹೆಚ್ಚಿಸುತ್ತದೆ: ರಾತ್ರಿ ಮಲಗಿ ಎದ್ದಾಗ ದೇಹವು ಸ್ವಲ್ಪ ಬಿಗಿಯಾಗಿರುತ್ತದೆ (Stiff). ಬೆಳಗಿನ ಆಸನಗಳು ಸ್ನಾಯುಗಳನ್ನು ಸಡಿಲಗೊಳಿಸಿ ದೇಹದ ಫ್ಲೆಕ್ಸಿಬಲಿಟಿಯನ್ನು ಹೆಚ್ಚಿಸುತ್ತವೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments