Tuesday, May 5, 2026
Homeಜಿಲ್ಲಾಸುದ್ದಿಕ್ರೀಡೆಯಿಂದ ಸದೃಢ ಆರೋಗ್ಯದ ಜೊತೆಗೆ ಸ್ನೇಹ ಸಂಬಂಧ ಶಾಶ್ವತವಾಗಿ ಉಳಿಯಲು ಸಹಕಾರಿ :ಮಿಥುನ್ ಗೌಡ ಕಣಚೂರು

ಕ್ರೀಡೆಯಿಂದ ಸದೃಢ ಆರೋಗ್ಯದ ಜೊತೆಗೆ ಸ್ನೇಹ ಸಂಬಂಧ ಶಾಶ್ವತವಾಗಿ ಉಳಿಯಲು ಸಹಕಾರಿ :ಮಿಥುನ್ ಗೌಡ ಕಣಚೂರು

ಮೂಡಿಗೆರೆ:35 ವರ್ಷ ಮೇಲ್ಪಟ್ಟವರ ಲೆಜೆಂಡ್ಸ್ ಕಪ್ ಕ್ರಿಕೆಟ್ ಪಂದ್ಯಾವಳಿಯನ್ನು ಕಣಚೂರು ಗ್ರಾಮದ ಯುವಕರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಸೇರಿ ಆಯೋಜಿಸಿದರು.

ಕ್ರೀಡೆ ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಸಹಕಾರಿ ಎಂದು ಸುಧೀರ್ ಹೆಗ್ಗುಡ್ಲು ತಿಳಿಸಿದರು.
ಅವರು ಹಂತೂರಿನಲ್ಲಿ ರಾಮೇಶ್ವರ ಕ್ರಿಕೆಟರ್ಸ್ ಕಣಚೂರು ವತಿಯಿಂದ ನಡೆದ 35 ವರ್ಷ ಮೇಲ್ಪಟ್ಟವರ ಲೆಜೆಂಡ್ ಕ್ರಿಕೆಟ್ ಪ್ರೀಮಿಯರ್ ಲೀಗ್ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿ. ಇಂದಿನ ಆಧುನಿಕ ಯುಗದಲ್ಲಿ ದೈಹಿಕ ಕ್ಷಮತೆಗೆ ಒತ್ತು ನೀಡುವುದು ಪ್ರಮುಖವಾಗಿದ್ದು. ಕ್ರೀಡೆ ಈ ನಿಟ್ಟಿನಲ್ಲಿ ಸಹಕಾರಿ. ಮನುಷ್ಯ ತನ್ನ ಸಹಜ ದೈಹಿಕ ಕ್ಷಮತೆಯನ್ನು ಮರೆತ ಪರಿಣಾಮ ಆರೋಗ್ಯದಲ್ಲಿ ಒತ್ತಡದಿಂದ ಹಲವು ಸಮಸ್ಯೆಗಳು ಕಂಡು ಬರುತ್ತಿದ್ದು. ಆಯುಷ್ಯ ಕಳೆದುಕೊಳ್ಳುವ ಹಂತ ತಲುಪಿದ್ದೇವೆ. ಕೃಷಿ ಇನ್ನಿತರ ಚಟುವಟಿಕೆಯೊಂದಿಗೆ ಕ್ರೀಡೆಯಲ್ಲಿ ಪಾಲ್ಗೊಳ್ಳುವುದು ಮಾನಸಿಕ ದೈಹಿಕ ಸದೃಢಕ್ಕೆ ಕಾರಣವಾಗುತ್ತದೆ. ಅದರಲ್ಲೂ ಪ್ರಮುಖವಾಗಿ ಯುವಕರನ್ನು ಬಿಟ್ಟು ಅವಕಾಶ ವಂಚಿತ 35 ವರ್ಷ ಮೇಲ್ಪಟ್ಟವರಿಗೆ ಕ್ರೀಡೆಯನ್ನ ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ ಎಂದರು.

ಕ್ರೀಡಾಕೂಟದ ಆಯೋಜಕ ಮಿಥುನ್ ಗೌಡ ಮಾತನಾಡಿ ಕ್ರೀಡೆ ಸ್ನೇಹ ಸಮ್ಮಿಲನಕ್ಕೆ ಸಾಕ್ಷಿಯಾಗುವುದರ ಜೊತೆಗೆ ಸ್ನೇಹ ಬಾಂದವ್ಯ ವನ್ನು ಶಾಶ್ವತವಾಗಿ ಉಳಿಯಲು ಕಾರಣ ಎಂದರು

ಮೂಡಿಗೆರೆ ಪರಿಸರದಲ್ಲಿ ಬೆಳೆದ ಆನೇಕ ಯುವಕರು ಕ್ರಿಕೆಟ್ ಲೋಕದಲ್ಲಿ ರಾಜ್ಯಮಟ್ಟದ ಪ್ರತಿಭೆಗಳಾಗಿ ಹೊರ ಹೊಮ್ಮಿ ತಾಲೂಕಿನ ಕೀರ್ತಿ ಹೆಚ್ಚಿಸಿದ್ದು. ಅಂತ ಆಟಗಾರರ ಗೌರವಿಸುವ.. ನಮ್ಮನ್ನಗಲಿದ ಸ್ನೇಹಿತರ ಸ್ಮರಿಸುವ ಸಲುವಾಗಿ ಕ್ರೀಡಾಕೂಟ ಆಯಜಿಸಲಾಗಿದೆ ಎಂದರು.

ಈ ಹಿಂದೆ ಕೂಡ ಕಡಿದಾಳು ಹಾಗೂ ಕಣಚೂರು ಗ್ರಾಮಗಳ ನಡುವಿನ ಸ್ನೇಹ ಸೌಹರ್ದತೆ ಸಲುವಾಗಿ ಸಂಕ್ರಾಂತಿ ಹಬ್ಬದ ದಿನದಂದು ಸಂಕ್ರಾಂತಿ ಕಪ್ ಆಯೋಜಿಸಿ ಬಾಂದವ್ಯ ಘಟ್ಟಿ ಮಾಡಿಕೊಂಡಿದ್ದು ಹಾಗೆಯೇ ಲೆಜೆಂಡ್ಸ್ ಕಪ್ ಕೂಡ ಸ್ನೇಹ ಬಾಂದವ್ಯಕ್ಕೆ ಇತಿಹಾಸದ ಪುಟಗಳಲ್ಲಿ ಉಳಿಯುತ್ತದೆ ಎಂದು ಅಭಿಮತ ವುಕ್ತ ಪಡಿಸಿದರು

ಲೀಗ್ ಮಾದರಿಯಲ್ಲಿ ಎರಡು ದಿನಗಳ ಕಾಲ ನಡೆದ ಪಂದ್ಯಾವಳಿಯಲ್ಲಿ ಆರು ತಂಡಗಳು ಭಾಗವಹಿಸಿದ್ದು. ಪ್ರಥಮ ಸ್ಥಾನವನ್ನು ಭೈರವ ವಾರಿಯರ್ಸ್ ಕಣಚೂರು. ದ್ವಿತೀಯ ಹನಿ ಫೀಲ್ಡ್ ಜೇನುಬ್ಯೆಲು. ತೃತೀಯ ಕಾಳಿಕಾಂಬ ದಾರದಹಳ್ಳಿ ಗಳಿಸಿದ್ದು. ಸರಣಿ ಶ್ರೇಷ್ಠ ದೇವರಾಜ್ ಅಂಗಡಿ ಪಂದ್ಯ ಪುರುಷೋತ್ತಮ ಮಿಥುನ್ ಕಣಚೂರು. ಉತ್ತಮ ಬ್ಯಾಟ್ಸ್ಮನ್ ಅಭಿ ಧಾರದಹಳ್ಳಿ ಉತ್ತಮ ಬೌಲರ್ ಪ್ರದ್ಯುಮ್ನ ಹೊಸಳ್ಳಿ ಗಳಿಸಿದ್ದು.

ಈ ಸಂದರ್ಭದಲ್ಲಿ ದೀಪಕ್ ಎಚ್ ಎಮ್. ವಿನೋದ್ ಕೆಎಸ್, ಹೆನ್ರಿ ರೋಬೆಲ್ಲೋ, ವಿಶ್ವನಾಥ್ ಮೋಹನ್, ಸುಧೀರ್ ಕಡಿದಾಳು, ರವೀಂದ್ರ ಸೇರಿದಂತೆ ಲೆಜೆಂಡ್ಸ್ ಕಪ್ ಕ್ರೀಡಾಕೂಟದ ಆಯೋಜಕರಾದ ಮಿಥುನ್. ಕೆ. ಪಿ. ಮಧು ಕಣಚೂರು. ಮನೋಜ್ ಕಣಚೂರು. ಸಂತೋಷ್ ದೇವವೃಂದ ಗ್ರಾಮಸ್ಥರು ಕ್ರೀಡಾಭಿಮಾನಿಗಳು ಉಪಸ್ಥಿತರಿದ್ದರು.

ವರದಿ :ಪುನೀತ್ ಕಡಿದಾಳು

9483811948

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!