Thursday, July 2, 2026
Homeಜಿಲ್ಲಾಸುದ್ದಿಡಿಸಿಎಂ ಡಿಕೆಶಿ ಬಗ್ಗೆ ಮಾತನಾಡಿದ ಯತ್ನಾಳ್‌ಗೆ ಉಗೀರಿ ಎಂದು ಕಿಡಿ ಕಾರಿದ ಸೋಮಶೇಖರ್..!‌

ಡಿಸಿಎಂ ಡಿಕೆಶಿ ಬಗ್ಗೆ ಮಾತನಾಡಿದ ಯತ್ನಾಳ್‌ಗೆ ಉಗೀರಿ ಎಂದು ಕಿಡಿ ಕಾರಿದ ಸೋಮಶೇಖರ್..!‌

Telegram Group
Join Now

ಬೆಂಗಳೂರು : ಸ್ವಪಕ್ಷ ಹಾಗೂ ಕಾಂಗ್ರೆಸ್‌ ವಿರುದ್ಧ ಸದಾ ಕೆಂಡ ಕಾರುವ ಬಸನಗೌಡ ಪಾಟೀಲ ಯತ್ನಾಳ್‌ ವಿರುದ್ಧ ಬಿಜೆಪಿಯ ಬಂಡಾಯ ಶಾಸಕ ಎಸ್‌.ಟಿ ಸೋಮಶೇಖರ್‌ ಕೆಂಡಾಮಂಡಲರಾಗಿದ್ದಾರೆ. ಡಿಕೆಶಿ ಅಧಿಕಾರಕ್ಕಾಗಿ ಟೆಂಪಲ್‌ ರನ್‌ ಮಾಡುತ್ತಿದ್ದಾರೆಂಬ ಯತ್ನಾಳ್‌ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಸೋಮಶೇಖರ್‌, ‘ಯತ್ನಾಳ್‌ಗೆ ಉಗೀರಿ. ಡಿ.ಕೆ.ಶಿವಕುಮಾರ್‌ ಬಗ್ಗೆ ಮಾತನಾಡಲು ಹೇಳಿದ್ದು ಯಾರು? ಅವರಿಗೂ ಶಿವಕುಮಾರ್‌ಗೂ ಏನ್‌ ಸಂಬಂಧ? ಅವರದ್ದೇ ನೂರೆಂಟು ಇದೆ. ಮೊದಲು ಅದನ್ನು ನೋಡಿಕೊಳ್ಳಬೇಕು’ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.
ಶಿವಕುಮಾರ್‌ ವಿರುದ್ಧ ಕನಕಪುರದಲ್ಲಿ ಕೇಸ್‌ ಹಾಕಿದ್ದಾರೆ. ಮೊದಲು ಆ ಕೇಸಿಗೆ ಹಾಜರಾಗಲು ಹೇಳಿ. ಡಿ.ಕೆ.ಶಿವಕುಮಾರ್‌ ಅವರ ಬಗ್ಗೆ ಹೊಗಳಿಕೆ, ತೆಗಳಿಕೆ ನಿಮ್ಮ ಕೆಲಸವಲ್ಲ. ವಕ್ಫ್‌, ವಿಜಯೇಂದ್ರ ಬಗ್ಗೆ ಏನೋ ಮಾಡಲು ಹೊರಟಿದ್ದೀರಲ್ಲ ಅದನ್ನು ನೆಮ್ಮದಿಯಿಂದ ಮಾಡಿ ಎಂದು ಕಿಡಿಕಾರಿದರು. ಶಿವಕುಮಾರ್‌ ದೇವಾಲಯಕ್ಕಾದರೂ ಹೋಗುತ್ತಾರೆ, ಜ್ಯೋತಿಷಿ ಬಳಿಯಾದರೂ ಹೋಗುತ್ತಾರೆ. ಅವರು 30 ವರ್ಷದಿಂದಲೂ ದೇಶದ ಎಲ್ಲಾ ದೇವಾಲಯಗಳಿಗೂ ಕುಟುಂಬ ಸಮೇತ ಹೋಗಿದ್ದಾರೆ. ಅವರ ಬಗ್ಗೆ ಪದೇ ಪದೆ ಮಾತನಾಡಲು ನೀವು ಯಾರು ಎಂದು ಪ್ರಶ್ನಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments