Monday, October 5, 2026
Homeಜಿಲ್ಲಾಸುದ್ದಿರಾಜ್ಯಮಟ್ಟದ ಸರ್ಕಾರಿ ನೌಕರರ ಪ್ರೀಮಿಯರ್ ಲೀಗ್: ಬೆಟ್ಟಗೆರೆ ಮಹೇಶ್ ಅಮೋಘ ಪ್ರದರ್ಶನ, ಶಿವಮೊಗ್ಗ ತಂಡ ಚಾಂಪಿಯನ್ಸ್

ರಾಜ್ಯಮಟ್ಟದ ಸರ್ಕಾರಿ ನೌಕರರ ಪ್ರೀಮಿಯರ್ ಲೀಗ್: ಬೆಟ್ಟಗೆರೆ ಮಹೇಶ್ ಅಮೋಘ ಪ್ರದರ್ಶನ, ಶಿವಮೊಗ್ಗ ತಂಡ ಚಾಂಪಿಯನ್ಸ್

Telegram Group
Join Now

ಬೆಂಗಳೂರು: ರಾಜ್ಯಮಟ್ಟದ ಸರ್ಕಾರಿ ನೌಕರರ ಪ್ರೀಮಿಯರ್ ಲೀಗ್ ಕ್ರಿಕೆಟ್ ಕ್ರೀಡಾಕೂಟ ಬೆಂಗಳೂರು ಎಚ್ ಎಸ್, ಆರ್ ಕ್ರೀಡಾ ಮೈದಾನದಲ್ಲಿ ಅದ್ದೂರಿಯಾಗಿ ನಡೆಯಿತು

ಈ ಕ್ರೀಡಾಕೂಟದಲ್ಲಿ ವಿವಿಧ ಭಾಗಗಳಿಂದ ತಂಡಗಳು ಭಾಗಿಯಾಗಿದ್ದವು , ಶಿವಮೊಗ್ಗ ತಂಡ ಚಾಂಪಿಯನ್ಸ್ಆಗಿ ಹೊರಹೊಮ್ಮಿದ್ದು ರಾಜ್ಯಮಟ್ಟದ ಗವರ್ನಮೆಂಟ್ ಅಫಿಶಿಯಲ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟದ ಮೊದಲ ಆವೃತ್ತಿಯ ಇದಾಗಿದ್ದು ಪ್ರಥಮ ಸ್ಥಾನ ಶಿವಮೊಗ್ಗ ತಂಡ ಟ್ರೋಫಿಯೊಂದಿಗೆ 2 ಲಕ್ಷ ನಗದು ಬಹುಮಾನ ತನ್ನದಾಗಿಸಿಕೊಂಡರೆ ದ್ವಿತೀಯ ಬಹುಮಾನ ರೈಲ್ವೇಸ್
ತಂಡದ ಪಾಲಾಯಿತು

ಕ್ರೀಡಾಕೂಟದಲ್ಲಿ ಪ್ರತಿನಿಧಿಸಿದ ಮೂಡಿಗೆರೆಯ ಪೊಲೀಸ್ ಅಧಿಕಾರಿ ಮಹೇಶ್ ಬೆಟ್ಟಗೆರೆ ರವರು ಅತ್ಯುತ್ತಮ ಪ್ರದರ್ಶನ ತೋರಿ ಗಮನ ಸೆಳೆದರು. ಪೈನಲ್ ಪಂದ್ಯದ ಕೊನೆಯ ಓವರ್ ಎಸೆದ ಅವರು ಅಮೋಘ ಪ್ರದರ್ಶನ ನೀಡಿ ತಂಡದ ಯಶಸ್ಸಿಗೆ ಕಾರಣರಾದರೂ

ರಾಜ್ಯದ ವಿವಿಧ ಜಿಲ್ಲೆಗಳ ವಿವಿಧ ಇಲಾಖೆಗಳ ಅಧಿಕಾರಿ ಸಿಬ್ಬಂದಿಗಳು ಶಿವಮೊಗ್ಗ ತಂಡವನ್ನು ಪ್ರತಿನಿಧಿಸಿದ್ದು ಚಿಕ್ಕಮಗಳೂರು ಜಿಲ್ಲೆಯಿಂದ ಮುಖೇಶ್ (ಶಿಕ್ಷಕ) ಮಹೇಶ್ ಬೆಟ್ಟಗೆರೆ(ಪೊಲೀಸ್) ಇಬ್ಬರು ಪ್ರತಿನಿಧಿಸಿದ್ದರು.

ಒಟ್ಟು ಮೂರು ದಿನಗಳ ಕಾಲ ವಿಜೃಂಭಣೆಯಿಂದ ಕ್ರೀಡಾಕೂಟ ನಡೆದಿದ್ದು ಕ್ರೀಡಾಕೂಟದ ಆಯೋಜಕತ್ವ ಸಿಟಿ ಸೂಪರ್ ಕಾಪ್ಸ್ ಪ್ರತಿನಿಧಿಗಳು ವಹಿಸಿದ್ದರು,, ಕೆಲಸದ ಒತ್ತಡದ ನಡುವೆಯೂ ಸರ್ಕಾರಿ ನೌಕರರು ಕ್ರಿಕೆಟ್ ಆಟದಲ್ಲಿ ತಲ್ಲೀನರಾದರು
ಮೂಡಿಗೆರೆ ತಾಲೂಕಿನಿಂದ ಸ್ಟಾರ್ ತಂಡದ ಹಿರಿಯ ಆಟಗಾರ ಮಹೇಶ್ ಬೆಟ್ಟಗೆರೆ ರವರು ಪ್ರತಿನಿಧಿಸಿ ಪ್ರಶಸ್ತಿ ಪಡೆಯುವ ಮೂಲಕ ತಾಲ್ಲೂಕಿಗೆ ಮತ್ತು ಜಿಲ್ಲೆಗೆ ಗೌರವ ತಂದಿದ್ದು ಶುಭಾಶಯಗಳ ಮಹಾಪುರ ಹರಿದು ಬಂದಿದೆ
ಶಿವಮೊಗ್ಗ ತಂಡದ ಪರವಾಗಿ ನಾಯಕ ತಮ್ಮಣ್ಣ ಜಾಂಬಗಿ (ಪೊಲೀಸ್) ಶಿವಮೊಗ್ಗ.
ವಿನಯ್ ಶಿಕ್ಷಣ ಇಲಾಖೆ ಮೈಸೂರು,ಯಶವಂತ್ ಉಪನ್ಯಾಸಕರು ಮೈಸೂರು, ಸೇವಾ ನಾಯಕ್ ಪೊಲೀಸ್ ಇಲಾಖೆ ದಾವಣಗೆರೆ,ಮಹೇಶ್ ಪೊಲೀಸ್ ಇಲಾಖೆ ಮೂಡಿಗೆರೆ,
ಜೈರಾಜ್, ಪ್ರಥಮ ದರ್ಜೆ ಸಹಾಯಕ ಕೊಡಗು, ತೀರ್ಥ ಕುಮಾರ್ ಶಿಕ್ಷಕರು ಬೇಲೂರು,
ಮುಕೇಶ್ ಶಿಕ್ಷಕರು ಚಿಕ್ಕಮಗಳೂರು,ವರುಣ್ ಪ್ರಥಮ ದರ್ಜೆ ಸಹಾಯಕ ಜಿಲ್ಲಾ ಪಂಚಾಯಿತಿ ಶಿವಮೊಗ್ಗ,ಅನಿಲ್ ಪ್ರಾಧ್ಯಾಪಕರು ದಾವಣಗೆರೆನರಸಿಂಹ ಶಿಕ್ಷಕರು ದಾವಣಗೆರೆ,ರಘು ಗೌಡ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಶಿವಮೊಗ್ಗ,ಶುಭಾಷ್ ಇಂಜಿನಿಯರ್, ಸಣ್ಣ ನೀರಾವರಿ ಇಲಾಖೆ ಶಿವಮೊಗ್ಗ ಇವರಗಳು ಪ್ರತಿನಿಧಿಸಿದ್ದರು

ವರದಿ:ಪುನೀತ್ ಕಡಿದಾಳು
9483811948

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!