Friday, June 26, 2026
Homebig breakingಆರೋಪಿ ದರ್ಶನ್‌ ಬೆನ್ನಿಗೆ ನಿಂತ ಸುಮಲತಾ ಅಂಬರೀಶ್‌ - ದರ್ಶನ್ ಅನ್ನುವ ಕಾರಣಕ್ಕೆ ಟಾರ್ಗೆಟ್‌ ಮಾಡ್ತಿದ್ದೀರ...

ಆರೋಪಿ ದರ್ಶನ್‌ ಬೆನ್ನಿಗೆ ನಿಂತ ಸುಮಲತಾ ಅಂಬರೀಶ್‌ – ದರ್ಶನ್ ಅನ್ನುವ ಕಾರಣಕ್ಕೆ ಟಾರ್ಗೆಟ್‌ ಮಾಡ್ತಿದ್ದೀರ ಅಂತ ಅಚ್ಚರಿಯ ಹೇಳಿಕೆ

ಮಂಡ್ಯ : ನಟ ದರ್ಶನ್‌ ಜೈಲಿನಲ್ಲಿ ರಾಜಾರೋಷವಾಗಿ ಬಿಂದಾಸ್‌ ಜೀವನ ನಡೆಸುತ್ತಿರೋ ಬಗ್ಗೆ ಮಾಜಿ ಸಂಸದೆ ಸುಮಲತಾ ಪ್ರತಿಕ್ರಿಯಿಸಿದ್ದಾರೆ. ದರ್ಶನ್‌ ನಮಗೆ. ದರ್ಶನ್‌ನನ್ನ ಎಲ್ರೂ ಸೇರಿ ಟಾರ್ಗೆಟ್‌ ಮಾಡ್ತಿದ್ದೀರ ಅಂತ ಗರಂ ಆಗಿದ್ದಾರೆ.
ಜೈಲಲ್ಲಿ ಇದೇ ಮೊದಲು ಈ ರೀತಿ ಆಗುತ್ತಿರೋದಾ… ಈ ಮೊದಲು ಇಂಥ ಘಟನೆಗಳು ನಡೆದೇ ಇಲ್ವಾ? ಆವಾಗೆಲ್ಲ ಯಾಕೆ ನೀವು ದೊಡ್ಡ ಸುದ್ದಿ ಮಾಡಿಲ್ಲ. ಈಗ ದರ್ಶನ್‌ ಅನ್ನುವ ಕಾರಣಕ್ಕೆ ಎಲ್ಲರೂ ಟಾರ್ಗೆಟ್‌ ಮಾಡುತ್ತಿದ್ದೀರಾ ಅನ್ನೋ ದಾಟಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ರು.
ಆ ಥರ ಏನೂ ಇಲ್ಲ, ಈ ಹಿಂದೆಯೂ ಹಲವು ಬಾರಿ ಜೈಲಿನ ಲೋಪಗಳ ಬಗ್ಗೆ ಸುದ್ದಿ ಮಾಡಿದ್ದೇವೆ ಅಂತ ಮಾಧ್ಯಮ ಪ್ರತಿನಿಧಿಗಳು ಸುಮಲತಾಗೆ ಮರು ಉತ್ತರ ನೀಡಿದರು. ಅದಕ್ಕೆ ಪುನರುತ್ತರಿಸಿದ ಸುಮಲತಾ, ಇದು ಪರಪ್ಪನ ಅಗ್ರಹಾರದಲ್ಲಿ ಮಾತ್ರ ನಡೆಯುತ್ತಿರುವುದಲ್ಲ. ಇದು ಎಲ್ಲಾ ಕಡೆ ನಡೆಯುತ್ತಿದೆ. ನೀವು ಎಲ್ಲವನ್ನೂ ಹೈಲೈಟ್‌ ಮಾಡಿ. ಅಮೇರಿಕಾಕ್ಕೆ ಹೋದ್ರೂ ಅಲ್ಲಿ ಗಾಂಜಾ ಮುಂತಾದವೆಲ್ಲ ಸಿಗುತ್ತದೆ ಅಂತ ಮೊಂಡು ವಾದ ಮುಂದಿಟ್ಟರು.
ರೌಡಿ ಶೀಟರ್‌ಗಳ ಜತೆ ಮಾತನಾಡುತ್ತಾ ಕುಳಿತ ಫೋಟೋ ಬಗ್ಗೆ ಮಾತನಾಡಿದ ಅವ್ರು, ದರ್ಶನ್‌ ಜೈಲೊಳಗೆ ಯಾರ ಜತೆಗೂ ಮಾತನಾಡಬಾರದಾ ಅಂತ ಮರು ಪ್ರಶ್ನಿಸಿದರು. ಅಲ್ಲಿನ ವೈಫಲ್ಯದ ಬಗ್ಗೆ ಅಧಿಕಾರಿಗಳು ಜವಾಬ್ದಾರಿ ಹೊರಬೇಕು. ದರ್ಶನ್‌ ಈಗ ಆರೋಪಿ. ಅವರಿಗೆ ಶಿಕ್ಷೆ ಆಗಿಲ್ಲ. ಜೈಲೊಳಗೆ ಎಲ್ಲಾ ರೀತಿಯ ಜನರಿರುತ್ತಾರೆ. ಅಲ್ಲಿನ ನಿಯಮಗಳನ್ನ ಅಧಿಕಾರಿಗಳು ಅನುಷ್ಟಾನಗೊಳಿಸಬೇಕೆಂದ್ರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments