Friday, May 15, 2026
Homeಜಿಲ್ಲಾಸುದ್ದಿಉಡುಪಿ: ಮೀನುಪ್ರಿಯರಿಗೆ ಗುಡ್‌ ನ್ಯೂಸ್: ಹೆಜಮಾಡಿ ಕಡಲ ತೀರದಲ್ಲಿ ರಾಶಿ ರಾಶಿ ಬೂತಾಯಿ ಮೀನು!

ಉಡುಪಿ: ಮೀನುಪ್ರಿಯರಿಗೆ ಗುಡ್‌ ನ್ಯೂಸ್: ಹೆಜಮಾಡಿ ಕಡಲ ತೀರದಲ್ಲಿ ರಾಶಿ ರಾಶಿ ಬೂತಾಯಿ ಮೀನು!

ಪಡುಬಿದ್ರೆ: ಉಡುಪಿ ಜಿಲ್ಲೆಯ ಹೆಜಮಾಡಿ ಕಡಲ ತೀರದಲ್ಲಿ ರಾಶಿ ರಾಶಿ ಬೂತಾಯಿ ಮೀನು ಸಿಕ್ಕಿದೆ. ಸಾಂಪ್ರದಾಯಿಕ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ತೀರ ಪ್ರದೇಶಕ್ಕೆ ಲಕ್ಷಾಂತರ ಮೀನುಗಳು ಬಂದಿವೆ. ಬೂತಾಯಿ ಮೀನು ತೀರ ಪ್ರದೇಶದಲ್ಲಿ ಜಿಗಿಯುತ್ತಿರುವ ವಿಡಿಯೋಗಳು ವೈರಲ್ ಆಗಿವೆ.


ಕಡಲ ತೀರದ ನಿವಾಸಿಗಳಿಗೆ ಬೂತಾಯಿ ಮೀನಿನ ಸುಗ್ಗಿ ಶುರುವಾಗಿದ್ದು, ಕೈಗೆ ಸಿಕ್ಕಿದಷ್ಟು ಮೀನನ್ನು ಹಿಡಿದು ಮನೆಗೆ ತೆರಳಿದ್ದಾರೆ. ಕೈರಂಪಣಿ ಬಲೆ ಬೀಸಿದ ವೇಳೆ ತೀರ ಪ್ರದೇಶಕ್ಕೆ ರಾಶಿ ರಾಶಿ ಬೂತಾಯಿ ಮೀನುಗಳು ಜಿಗಿದಿವೆ.

ಸದ್ಯ ಮಾರುಕಟ್ಟೆಯಲ್ಲಿ ಬೇರೆಲ್ಲ ಮೀನು ದುಬಾರಿಯಾಗಿದ್ದು, ಬೂತಾಯಿ ಮೀನು ಹೇರಳವಾಗಿ ಸಿಗುತ್ತಿರುವ ಕಾರಣ ಬೆಲೆಯೂ ಕೊಂಚ ಕಡಿಮೆ ಇದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!