Wednesday, July 15, 2026
Homeಜಿಲ್ಲಾಸುದ್ದಿಲಕ್ಕಿ ಲೇಡಿ ನಯನಾ ಮೋಟಮ್ಮಗೆ ಸಿಗುತ್ತಾ ಸಂಪುಟದಲ್ಲಿ ಸಚಿವೆ ಸ್ಥಾನ?

ಲಕ್ಕಿ ಲೇಡಿ ನಯನಾ ಮೋಟಮ್ಮಗೆ ಸಿಗುತ್ತಾ ಸಂಪುಟದಲ್ಲಿ ಸಚಿವೆ ಸ್ಥಾನ?

Telegram Group
Join Now

ಮೂಡಿಗೆರೆ : ವಿಧಾನಸಭಾ ಚುನಾವಣೆ ರಣರಂಗದಲ್ಲಿ ಕೂದಲೇಳೆ ಅಂತರದಲ್ಲಿ ಬಿಜೆಪಿ ಅಭ್ಯರ್ಥಿ ದೀಪಕ್ ದೊಡ್ಡಯ್ಯ ಅವರಿಗೆ ಸೋಲುಣಿಸಿ ಗೆಲುವಿನ ವಿಜಯ ಮಾಲೆ ಧರಿಸಿದ ಶ್ರೀಮತಿ ನಯನಾ ಮೋಟಮ್ಮ ಅವರದು ಅದೃಷ್ಟದ ಗೆಲುವು ಎಂದಿದ್ದ ಸ್ಥಳೀಯರು ನೆಚ್ಚಿನ ನಾಯಕಿಗೆ ಸಚಿವೆ ಸ್ಥಾನ ಸಿಗುತ್ತಾ ಎಂಬ ಕಾತುರತೆ ಯಿಂದ ಕಾಯುತ್ತಿರುವುದು ಅಷ್ಟೆ ಸತ್ಯವಾಗಿದೆ.

ಹೌದು. ನಯನಾ ಮೋಟಮ್ಮ ರಾಜಕೀಯ ಕ್ಷೇತ್ರದಲ್ಲಿ ತಾಯಿ ಶ್ರೀಮತಿ ಮೋಟಮ್ಮ ಅವರ ಆಶೀರ್ವಾದದಿಂದ ರಾಜಕೀಯ ಆಖಾಡಕ್ಕೆ ದುಮುಕಿದ ಅವರು ತಾವು ಪ್ರತಿನಿಧಿಸಿದ ಮೊದಲ ಚುನಾವಣೆಯಲ್ಲಿ ತಮ್ಮ ಪಕ್ಷದ ಕೆಲವರ ವಿರೋಧದ ನಡುವೆಯೂ ಗೆದ್ದು ಬಿಗಿದ್ದು ಇತಿಹಾಸ ವಾಗಿದ್ದು… ಸಚಿವೆ ಸ್ಥಾನ ಸಿಗುತ್ತಾ ಎಂಬುದು ಮೂಡಿಗೆರೆ ಸಾರ್ವಜನಿಕ ವಲಯದಲ್ಲಿ ಪ್ರಶ್ನೆ ಮೂಡಿದೆ.

ರಾಜಕೀಯ ಕ್ಷೇತ್ರದಲ್ಲಿ ಕ್ಷಣ ಕ್ಷಣಕ್ಕೂ ಸಿದ್ದರಾಮಯ್ಯ ಮುಖ್ಯ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೋ ಇಲ್ಲವೋ ಎಂಬ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದ್ದು ಕಾಂಗ್ರೆಸ್ ಪಕ್ಷದ ರಾಜಕೀಯ ಚಾಣಕ್ಯ ಒಕ್ಕಲಿಗ ಸಮುದಾಯದ ಅಭ್ಯರ್ಥಿ ಆದ ಶ್ರೀ ಡಿ. ಕೆ. ಶಿವಕುಮಾರ್ ಅವರು ಕರ್ನಾಟಕದ ನೂತನ ಮುಖ್ಯಮಂತ್ರಿ ಘೋಷಣೆ ಆಗಿದ್ದು ಇವರ ಆಪ್ತ ವಲಯದಲ್ಲಿ ಒಬ್ಬರಾದ ನಯನಾ ಮೋಟಮ್ಮ ಅವರಿಗೆ ನೂತನ ಸಚಿವ ಸಂಪುಟದಲ್ಲಿ ಅವಕಾಶ ಸಿಗಬಹುದು ಎಂಬುವ ಭರವಸೆ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಮೂಡಿದೆ.

ವರದಿ:ಪುನೀತ್ ಕಡಿದಾಳು

9483811948

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments