ಮಳೆಗಾಲದಲ್ಲಿ ಮನೆಯೊಳಗೆ ಸೊಳ್ಳೆ, ಎರೆಹುಳ ಸೇರಿದಂತೆ ಅನೇಕ ಜಾತಿಯ ಕೀಟಗಳು ಬರುತ್ತವೆ. ಈ ಕೀಟಗಳ ಕಚ್ಚುವಿಕೆಯಿಂದ ರೋಗಕ್ಕೆ ತುತ್ತಾಗಬೇಕಾಗುತ್ತದೆ.ಮಳೆಗಾಲದಲ್ಲಿ ವಾತಾವರಣ ಶೀತಮಯವಾಗಿರುವ ಕಾರಣ ಮನೆಯ ಸುತ್ತಮುತ್ತ ಕೀಟ, ನೊಣಗಳ ಸಂಖ್ಯೆ ಹೆಚ್ಚಳವಾಗುತ್ತದೆ. ಈ ಕೀಟಗಳು ಮನೆಯನ್ನು ಪ್ರವೇಶಿಸಿಸುತ್ತವೆ. ಸಾಮಾನ್ಯವಾಗಿ ಮಳೆಗಾಲದಲ್ಲಿ ಇಂತಹ ಕಾಣಿಸಿಕೊಳ್ಳುವ ವಿಷಕಾರಿ ಕೀಟವಾಗಿದ್ದು, ಕಚ್ಚಿದರೆ ತೀವ್ರ ನೋವು,ಊತ ಮತ್ತು ಕೆಂಪು ಬಣ್ಣ ಉಂಟಾಗಬಹುದು.
ಮೊದಲಿಗೆ ಈ ವಿಚಾರ ಗೊತ್ತಿರಲಿ ಜರಿಹುಳುಗಳು ಅಥವಾ ಲಕ್ಷ್ಮಿ ಚೇಳು ತೇವಾಂಶ ಮತ್ತು ಕೊಳೆಯುತ್ತಿರುವ ಸಾವಯವ ವಸ್ತುಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಆದ್ದರಿಂದ, ಮೊದಲ ಹೆಜ್ಜೆ ಮನೆಯನ್ನು ಒಣಗಿಸಿ, ತೇವಾಂಶವಿಲ್ಲದಂತೆ ಇಡುವುದು.
ಬಳಕೆಯ ನಂತರ ಅಡುಗೆಮನೆಯ ಸಿಂಕ್ ಅನ್ನು ಸಂಪೂರ್ಣವಾಗಿ ಒಣಗಿಸಿ. ಸೋರುವ ನಲ್ಲಿಗಳು ಅಥವಾ ಪೈಪ್‌ಗಳನ್ನು ತಕ್ಷಣ ದುರಸ್ತಿ ಮಾಡಿ. ಸ್ನಾನಗೃಹ ಮತ್ತು ಅಡುಗೆಮನೆಯಲ್ಲಿ ನೀರು ಸಂಗ್ರಹವಾಗುವುದನ್ನು ತಪ್ಪಿಸಿ. ಅಲ್ಲದೆ, ಮಲಗುವ ಮೊದಲು ನೆಲವನ್ನು ಒಣಗಿಸಿ. ತೇವಾಂಶವನ್ನು ತೆಗೆದುಹಾಕುವುದ ರಿಂದ ಜರಿಹುಳುಗಳು ಅಥವಾ ಲಕ್ಷ್ಮಿ ಚೇಳು ಸಂಖ್ಯೆ ಕಡಿಮೆಯಾಗುತ್ತದೆ.
ಪ್ರತಿದಿನ ಕಸವನ್ನು ವಿಲೇವಾರಿ ಮಾಡಿ ಮತ್ತು ಕಸದ ಬುಟ್ಟಿಗೆ ಮುಚ್ಚಳವಿರಲಿ. ಸಿಂಕ್‌ಗಳು ಮತ್ತು ಡ್ರೈನ್‌ಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸಿ. ಸ್ಥಳವು ಸ್ವಚ್ಛವಾಗಿದ್ದಷ್ಟೂ ಕೀಟಗಳು ಕಡಿಮೆಯಾಗುತ್ತವೆ.
ರಾಸಾಯನಿಕಗಳನ್ನು ಬಳಸದೆ ಜರಿ ಹುಳುಗಳನ್ನು ಮನೆಯಿಂದ ಓಡಿಸಲು ಹಾಗೂ ಇವು ಮನೆಯೊಗೆ ಬರದಂತೆ ತಡೆಯಲು, ನೈಸರ್ಗಿಕ ವಿಧಾನವು ಕೂಡ ಅತ್ಯಂತ ಪರಿಣಾಮಕಾರಿಯಾಗಿದೆ.
ಬೇವಿನ ಎಣ್ಣೆ ಅಥವಾ ಬೇವಿನ ಎಲೆಗಳು, ಲವಂಗ ಮತ್ತು ಬೇ ಎಲೆಗಳನ್ನು ಮೂಲೆಗಳಲ್ಲಿ ಇರಿಸಿ. ಬೋರಿಕ್ ಪುಡಿಯನ್ನು ಲಘುವಾಗಿ ಸಿಂಪಡಿಸಿ. ಇವು ಕೀಟಗಳನ್ನು ದೂರವಿಡಲು ಸಹಾಯ ಮಾಡುತ್ತದೆ.
ಜರಿ ಹುಳುಗಳು ಅಥವಾ ಲಕ್ಷ್ಮಿಚೇಳು ಉಪ್ಪು ಮತ್ತು ಕರ್ಪೂರದ ವಾಸನೆಯನ್ನು ತಡೆದುಕೊಳ್ಳುವುದಿಲ್ಲ. ಹೀಗಾಗಿ ಒಂದು ಬಕೆಟ್ ಉಗುರುಬೆಚ್ಚಗಿನ ನೀರಿಗೆ 2 ಚಮಚ ಕಲ್ಲುಪ್ಪು ಬೆರೆಸಿ ನೆಲವನ್ನು ಒರೆಸಿ
