ಬೆಂಗಳೂರು: ರಾಜ್ಯದಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ಸಚಿವ ಸಂಪುಟ ವಿಸ್ತರಣೆಗೆ ಮುಹೂರ್ತ ನಿಗದಿಯಾಗಿದ್ದು, ಇಂದು ಸಂಜೆ ಲೋಕಭವನದಲ್ಲಿ ನೂತನ ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಹೈಕಮಾಂಡ್ ಅಂತಿಮಗೊಳಿಸಿದ ಪಟ್ಟಿಯಂತೆ ಪ್ರಮುಖ ನಾಯಕರು ಸಂಪುಟ ಸೇರಲಿದ್ದು, ಸಚಿವ ಸ್ಥಾನಕ್ಕಾಗಿ ನಡೆದ ಸುದೀರ್ಘ ಕಾಯುವಿಕೆಗೆ ತೆರೆಬಿದ್ದಿದೆ.
ಸಂಪುಟ ಸೇರಲಿರುವ ಸಂಭಾವ್ಯ ಶಾಸಕರ ಪಟ್ಟಿ PUBLIC IMPACTಗೆ ಲಭ್ಯವಾಗಿದೆ.
ಜಮೀರ್ ಅಹ್ಮದ್ ಖಾನ್ – ಚಾಮರಾಜಪೇಟೆ (ಮುಸ್ಲಿಂ)
ಎಸ್.ಎಸ್ ಮಲ್ಲಿಕಾರ್ಜುನ್ – ದಾವಣಗೆರೆ ಉತ್ತರ (ಲಿಂಗಾಯತ)
ಲಕ್ಷ್ಮಣ ಸವದಿ – ಅಥಣಿ (ಲಿಂಗಾಯತ)
ಶಿವರಾಜ್ ತಂಗಡಗಿ – ಕನಕಗಿರಿ (ಎಸ್ಸಿ)
ಕೆ.ಎಂ ಶಿವಲಿಂಗೇಗೌಡ – ಅರಸೀಕೆರೆ (ಒಕ್ಕಲಿಗ)
ಚಲುವರಾಯಸ್ವಾಮಿ – ನಾಗಮಂಗಲ (ಒಕ್ಕಲಿಗ)
ಗಾಯತ್ರಿ ಶಾಂತೇಗೌಡ – ಎಂಎಲ್‌ಸಿ ಚಿಕ್ಕಮಗಳೂರು (ಒಕ್ಕಲಿಗ)
ಬಿ.ನಾಗೇಂದ್ರ – ಬಳ್ಳಾರಿ (ಎಸ್ಟಿ)
ಡಾ.ಅಜಯ್ ಸಿಂಗ್ – ಜೇವರ್ಗಿ
ಹೆಚ್.ಸಿ ಬಾಲಕೃಷ್ಣ – ಮಾಗಡಿ (ಒಕ್ಕಲಿಗ)
ನರೇಂದ್ರ ಸ್ವಾಮಿ – ಮಳವಳ್ಳಿ
ಬಸವರಾಜ್ ರಾಯರೆಡ್ಡಿ – ಯಲಬುರ್ಗ
ರಿಜ್ವಾನ್ ಅರ್ಷದ್ – ಶಿವಾಜಿನಗರ (ಮುಸ್ಲಿಂ)
ಟಿ.ರಘುಮೂರ್ತಿ – ಚಳ್ಳಕೆರೆ
ವಿಜಯಾನಂದ ಕಾಶಪ್ಪನವರ್ – ಹುನಗುಂದ
ಸಂತೋಷ್ ಲಾಡ್ – ಕಲಘಟಗಿ (ಮರಾಠ)
ಮಧು ಬಂಗಾರಪ್ಪ – ಸೊರಬ (ಈಡಿಗ)
ಸಿ.ಪುಟ್ಟರಂಗಶೆಟ್ಟಿ – ಚಾಮರಾಜನಗರ
ಮಂಕಾಳು ವೈದ್ಯ – ಭಟ್ಕಳ – ಹೊನ್ನಾವರ
ಕೆ.ಎಸ್ ಬಸವಂತಪ್ಪ – ಮಾಯಕೊಂಡ
ವಿಧಾನಸಭೆ ಸ್ಪೀಕರ್ – ಜಿ.ಎಸ್ ಪಾಟೀಲ್
ಉಪಸಭಾಧ್ಯಕ್ಷರಾಗಿ – ಎ.ಎಸ್ ಪೊನ್ನಣ್ಣ
ವಿಧಾನಪರಿಷತ್ ಸಭಾಪತಿ – ಸಲೀಂ ಅಹ್ಮದ್
ಪರಿಷತ್ ಉಪಸಭಾಪತಿ – ಉಮಾಶ್ರೀ
ಮುಖ್ಯಮಂತ್ರಿಗಳು ಸೇರಿ ಒಟ್ಟು 34 ಸದಸ್ಯ ಬಲದ ಸಚಿವ ಸಂಪುಟದಲ್ಲಿ ಸದ್ಯ ಖಾಲಿ ಇರುವ 20 ಸ್ಥಾನಗಳ ಪೈಕಿ 18 ಸಚಿವ ಸ್ಥಾನಗಳನ್ನು ಭರ್ತಿ ಮಾಡಿ, 2 ಸ್ಥಾನಗಳನ್ನು ಖಾಲಿ ಉಳಿಸಿಕೊಳ್ಳುವ ನಿರೀಕ್ಷೆಯಿದೆ. ಸಂಪುಟ ವಿಸ್ತರಣೆಯಲ್ಲಿ ಹೊಸಮುಖಗಳಿಗೆ ಆದ್ಯತೆ ಸಿಗುತ್ತಿದ್ದು, ಹಿಂದಿನ ಸಿದ್ದರಾಮಯ್ಯ ಸಂಪುಟದಲ್ಲಿದ್ದ 6 ಮಂದಿಗೆ ಮತ್ತೆ ಅವಕಾಶ ಗಿಟ್ಟಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.
