Sunday, July 26, 2026
Homeಬ್ರೇಕಿಂಗ್ ನ್ಯೂಸ್ಇಂದು ಡಿಕೆಶಿ ಪ್ರಮಾಣವಚನ : ಯಾರಿಗೆಲ್ಲಾ ಮಂತ್ರಿಸ್ಥಾನ?

ಇಂದು ಡಿಕೆಶಿ ಪ್ರಮಾಣವಚನ : ಯಾರಿಗೆಲ್ಲಾ ಮಂತ್ರಿಸ್ಥಾನ?

Telegram Group
Join Now

ಬೆಂಗಳೂರು: ಪಕ್ಷ ನಿಷ್ಠ, ಕಾಂಗ್ರೆಸ್ ಪಕ್ಷದ ಸಂಘಟನಾಕಾರ ಡಿ.ಕೆ. ಶಿವಕುಮಾರ್ ಇಂದು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಡಿಕೆಶಿ ಪ್ರಮಾಣ ವಚನಕ್ಕೆ ಲೋಕಭವನದ ಗಾಜಿನ ಮನೆಯಲ್ಲಿ ಸಕಲ ಸಿದ್ಧತೆ ನಡೆದಿದೆ. ವೇದಿಕೆಯಲ್ಲಿ 20 ಆಸನಗಳ ವ್ಯವಸ್ಥೆ ಮಾಡಲಾಗಿದೆ. ಸ್ವಾಮೀಜಿ, ಫಾದರ್ ಹಾಗೂ ಮೌಲ್ವಿ ಸೇರಿದಂತೆ ಸರ್ವಧರ್ಮಗಳ 55 ಸ್ವಾಮೀಜಿಗಳಿಗೆ ಆಹ್ವಾನ ನೀಡಲಾಗಿದ್ದು, ಅವರ ಸಮ್ಮುಖದಲ್ಲಿ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಡಿ.ಕೆ. ಶಿವಕುಮಾರ್ ಜೊತೆ 10ಕ್ಕೂ ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದು ಈ ಪಟ್ಟಿ ಫೈನಲ್ ಆಗಬೇಕಿದೆ. ರಾಹುಲ್ ಗಾಂಧಿ, ಪ್ರಿಯಾಂಕಗಾಂಧಿ, ವೇಣುಗೋಪಾಲ್, ಸುರ್ಜೇವಾಲಾ ಸೇರಿದಂತೆ ಹಲವು ಗಣ್ಯರಿಗೆ ಪ್ರಮಾಣವಚನಕ್ಕೆ ಆಹ್ವಾನ ನೀಡಲಾಗಿದೆ. ಈಗಾಗಲೇ ಕೇರಳ ಸಿಎಂ ಸತೀಶನ್ ಬೆಂಗಳೂರಿಗೆ ಬಂದಿದ್ದಾರೆ. 80ರ ದಶಕದಿಂದ ಸುದೀರ್ಘ ರಾಜಕೀಯ ಜೀವನ, ರಾಜಕಾರಣ ಆಳ-ಅಗಲದ ಅನುಭವ, ಐಟಿ-ಇಡಿ ತನಿಖೆ ಹಾಗೂ ಜೈಲುವಾಸದ ನಂತರ ಮುಖ್ಯಮಂತ್ರಿ ಪಟ್ಟ ಅಲಂಕರಿಸುತ್ತಿದ್ಧಾರೆ.

ಹೈಕಮಾಂಡ್ ಭೇಟಿ ಬಳಿಕ ಬೆಂಗಳೂರಿಗೆ ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಒಟ್ಟಿಗೆ ಆಗಮಿಸುತ್ತಿದ್ದು, ಇಂದು ಬಹುತೇಕ 10ಕ್ಕೂ ಹೆಚ್ಚು ಮಂದಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆಗಳು ಹೆಚ್ಚಾಗಿವೆ.

ಸಂಭಾವ್ಯ ಸಚಿವರು
ಡಾ. ಜಿ. ಪರಮೇಶ್ವರ್,
ಕೊರಟಗೆರೆ ಶಾಸಕ, ದಲಿತ ಸಮುದಾಯ

ಯು.ಟಿ. ಖಾದರ್
ಮಂಗಳೂರು ಶಾಸಕ, ಮುಸ್ಲಿ ಸಮುದಾಯ

ರಾಮಲಿಂಗಾರೆಡ್ಡಿ
ಬಿಟಿಎಂ ಲೇಔಟ್ ಶಾಸಕ,

ಕೆ.ಜೆ.ಜಾರ್ಜ್
ಸರ್ವಜ್ಞ ನಗರ, ಕ್ರಿಶ್ಚಿಯನ್ ಸಮುದಾಯ

ಪ್ರಿಯಾಂಕ್ ಖರ್ಗೆ
ಚಿತ್ತಾಪುರ ಶಾಸಕ, ದಲಿತ ಸಮುದಾಯ

ಸತೀಶ್ ಜಾರಕಿಹೊಳಿ
ಯಮಕನಮರಡಿ ಶಾಸಕ, ದಲಿತ ಸಮುದಾಯ

ಎಂ.ಬಿ.ಪಾಟೀಲ್
ಬಬಲೇಶ್ವರ ಶಾಸಕ, ಲಿಂಗಾಯತ ಸಮುದಾಯ

ಕೃಷ್ಣಬೈರೇಗೌಡ
ಬ್ಯಾಟರಾಯನಪುರ ಶಾಸಕ, ಒಕ್ಕಲಿಗ ಸಮುದಾಯ

ಯತೀಂದ್ರ ಸಿದ್ದರಾಮಯ್ಯ
ಪರಿಷತ್ ಸದಸ್ಯ, ಕುರುಬ ಸಮುದಾಯ

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments