Wednesday, August 12, 2026
Homeಆಧ್ಯಾತ್ಮಮಹಾಕುಂಭ ಮೇಳದಲ್ಲಿ ಸುಧಾಮೂರ್ತಿ - ಅಪರೂಪದ ಅವಕಾಶ ಕಣ್ತುಂಬಿಕೊಂಡಿದ್ದು ನನ್ನ ಪುಣ್ಯ ಎಂದ ಸಂಸದೆ

ಮಹಾಕುಂಭ ಮೇಳದಲ್ಲಿ ಸುಧಾಮೂರ್ತಿ – ಅಪರೂಪದ ಅವಕಾಶ ಕಣ್ತುಂಬಿಕೊಂಡಿದ್ದು ನನ್ನ ಪುಣ್ಯ ಎಂದ ಸಂಸದೆ

Telegram Group
Join Now

ಬೆಂಗಳೂರು : ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ 144 ವರ್ಷಗಳ ನಂತರ ಮಹಾಕುಂಭ ಮೇಳ ನಡೆಯುತ್ತಿದೆ. ದೇಶ ವಿದೇಶಗಳಿಂದ ಕೋಟ್ಯಂತರ ಮಂದಿ ಬಂದು ಪವಿತ್ರ ಸ್ನಾನ ಮಾಡುತ್ತಿದ್ದಾರೆ. ಖ್ಯಾತ ಉದ್ಯಮಿ, ರಾಜ್ಯಸಭಾ ಸದಸ್ಯೆ ಸುಧಾ ಮೂರ್ತಿ ಕೂಡ ಮಹಾಕುಂಭ ಮೇಳಕ್ಕೆ ತೆರಳಿದ್ದಾರೆ.
ಜನವರಿ 21ರಂದು ಪ್ರಯಾಗರಾಜ್ ತಲುಪಿರುವ ಅವರು ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ. ಮೂರು ದಿನ ಕಾಲ ಪ್ರಯಾಗರಾಜ್‌ನಲ್ಲೇ ಇರಲಿದ್ದು, ಪಿತೃತರ್ಪಣ ಬಿಡಲಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಮಹಾಕುಂಭ ಅತ್ಯುತ್ತಮ ತೀರ್ಥಯಾತ್ರೆ. ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳ ಜೀವಿತಾವಧಿಯಲ್ಲಿ ಒಮ್ಮೆ ಮಾತ್ರ ಸಿಗುವ ಅವಕಾಶ. ಇದು ಅತ್ಯಂತ ಪವಿತ್ರ ಸ್ಥಳ. ನನಗೆ ಅದನ್ನು ನೋಡಲು ಅವಕಾಶ ಸಿಕ್ಕಿದ್ದು ಹಾಗೂ ನಾನು ಇಲ್ಲಿಗೆ ಬಂದಿದ್ದು ತುಂಬಾ ಸಂತೋಷ ನೀಡಿದೆ ಎಂದಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments