Tuesday, February 10, 2026
Homeಜಿಲ್ಲಾಸುದ್ದಿಶೃಂಗೇರಿ: ರೈತರ ತೀವ್ರ ಸಂಕಷ್ಟ, ರಸ್ತೆ ಸಮಸ್ಯೆ :ಕೃಷಿಕ ಸಮಾಜದ ಮುಖಂಡರಿಂದ ಜಗದ್ಗುರುಗಳಿಗೆ ನಿವೇದನೆ...

ಶೃಂಗೇರಿ: ರೈತರ ತೀವ್ರ ಸಂಕಷ್ಟ, ರಸ್ತೆ ಸಮಸ್ಯೆ :ಕೃಷಿಕ ಸಮಾಜದ ಮುಖಂಡರಿಂದ ಜಗದ್ಗುರುಗಳಿಗೆ ನಿವೇದನೆ ಸಲ್ಲಿಕೆ

ಶೃಂಗೇರಿ: ತಾಲೂಕಿನಾದ್ಯಂತ ಅರಣ್ಯ ಇಲಾಖೆಯ ಹಲವು ಕಾಯ್ದೆಗಳಿಂದ ರೈತರು ತೀವ್ರ ಸಂಕಷ್ಟ ಎದುರಿಸುತ್ತಿದ್ದು, ಇರೋ ಅಲ್ಪ ಸ್ವಲ್ಪ ಕೃಷಿ ಭೂಮಿಯ ಸಾಗುವಳಿ ಮಾಡಲಾಗುತ್ತಿಲ್ಲ. ಅದರ ಮಧ್ಯೆ ಬೆಳೆಗೆ ರೋಗ ಭಾಧಿಸಿರುವುದರಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು ಇಂದು ಕೃಷಿಕ ಸಮಾಜವು ಶೃಂಗೇರಿ ಶ್ರೀಶಾರದಾ ಪೀಠದ ಜಗದ್ಗುರುಗಳನ್ನು ಭೇಟಿ ಮಾಡಿ ನಿವೇದನೆ ಸಲ್ಲಿಸಿದ್ದಾರೆ.

ಇನ್ನು ಶೃಂಗೇರಿ – ಕೆರೆಕಟ್ಟೆ ಮುಖಾಂತರ ಮಂಗಳೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 169 ರ ರಸ್ತೆ ಅಗಲೀಕರಣ ಆಗದೇ ಶ್ರೀಮಠಕ್ಕೆ ಬರುವ ಭಕ್ತಾಧಿಗಳು,ಆ ಭಾಗದ ಜನರಿಗೆ ವಿಪರೀತ ತೊಂದರೆಯಾಗಿದ್ದು ಕೂಡಲೇ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಬಿಡುಗಡೆಗೊಳಿಸಿ ರಸ್ತೆ ಅಗಲೀಕರಣ ಮಾಡಬೇಕಿದೆ

ಅದಕ್ಕಾಗಿ ಈ ಸಮಸ್ಯೆಗಳನ್ನು ಸರ್ಕಾರದ ಸಂಬಂಧಿಸಿದ ಇಲಾಖೆಯ ಸಚಿವರೊಂದಿಗೆ ಸಮಾಲೋಚಿಸಿ ತಮ್ಮ ಮಾರ್ಗದರ್ಶನ ನೀಡುವಂತೆ ತಾಲೂಕಿನ ಕೃಷಿಕ ಸಮಾಜದವರು ಮತ್ತು ನಾಗರೀಕರು ಜಗದ್ಗುರುಗಳಲ್ಲಿ ಪ್ರಾರ್ಥನೆ ಮಾಡಿದ್ದಾರೆ.

ಭಕ್ತರ ಪ್ರಾರ್ಥನೆ ಕೇಳಿದ ಜಗದ್ಗುರುಗಳು ಸಂಬಂಧಪಟ್ಟವರೊಂದಿಗೆ ಈ ಬಗ್ಗೆ ನಿವೇದಿಸೋದಾಗಿ ಹೇಳಿದ್ದಾರೆ

ವರದಿ: ವಿಠಲ್‌ ಶೃಂಗೇರಿ

7676798969

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!