Friday, July 31, 2026
Homeಜಿಲ್ಲಾಸುದ್ದಿಮೂಡಿಗೆರೆ: ಜೆಡಿಎಸ್ ಪಕ್ಷದ ಕಚೇರಿಯಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ 135ನೇ ಜನ್ಮದಿನ ಆಚರಣೆ

ಮೂಡಿಗೆರೆ: ಜೆಡಿಎಸ್ ಪಕ್ಷದ ಕಚೇರಿಯಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ 135ನೇ ಜನ್ಮದಿನ ಆಚರಣೆ

Telegram Group
Join Now

ಮೂಡಿಗೆರೆ:ಜೆಡಿಎಸ್ ಪಕ್ಷದ ವತಿಯಿಂದ ಪಕ್ಷದ ಕಚೇರಿಯಲ್ಲಿ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ 135ನೆ ಜನ್ಮ ದಿನ ಆಚರಣೆ ಸಡಗರದಿಂದ ಆಚರಿಸಲಾಯಿತು

ಪಕ್ಷದ ಹಿರಿಯ ಮುಖಂಡರುಗಳು ಅಂಬೇಡ್ಕರ್ ಅವರ ಭಾವ ಚಿತ್ರಕ್ಕೆ ಪುಷ್ಪರ್ಚಾನೆ ಸಲ್ಲಿಸಿ ಗೌರವ ಅರ್ಪಣೆ ಸಲ್ಲಿಸಲಾಯಿತು

ಈ ಸಂದರ್ಭದಲ್ಲಿ ಮಹಾಸಭಾ ಛಲವಾದಿ ಸಂಘಟನೆ ತಾಲೂಕು ಅಧ್ಯಕ್ಷ ಹಾಗೂ ಜೆಡಿಎಸ್ ಮುಖಂಡ ಮಂಜುನಾಥ್ ಬೆಟ್ಟಗೆರೆ ಮಾತನಾಡಿ ಭಾರತೀಯ ರಾಜಕಾರಣಿ ಮತ್ತು ಸಮಾಜ ಸುಧಾರಕ ಬಿ.ಆರ್. ಅಂಬೇಡ್ಕರ್ ಅವರ ಸ್ಮರಣಾರ್ಥವಾಗಿ ಏಪ್ರಿಲ್ 14 ರಂದು ಭೀಮ್ ಜಯಂತಿ ಎಂದೂ ಕರೆಯಲ್ಪಡುವ ಅಂಬೇಡ್ಕರ್ ಜಯಂತಿಯನ್ನು ಆಚರಿಸಲಾಗುತ್ತದೆ, 1891 ರ ಏಪ್ರಿಲ್ 14 ರಂದು ಜನಿಸಿದ ಅಂಬೇಡ್ಕರ್ ಅವರು ಭವ್ಯ ಭಾರತದ ಸಂವಿಧಾನ ಶಿಲ್ಪಿ ಆಗಿದ್ದು ಇವರು ಬರೆದ ಸಂವಿಧಾನದಿಂದ ನಾವೆಲ್ಲರೂ ಸ್ವತಂತ್ರ್ಯ ದಿಂದ ಬದುಕುತ್ತಿದ್ದೇವೆ ಎಂದರು

ಹಿರಿಯ ಮುಖಂಡ ಡಿ. ಬಿ. ಅಶೋಕ್ ಮಾತನಾಡಿ ಭಾರತ ದೇಶದ ಬೆಳವಣಿಗೆಯಲ್ಲಿ ಅಂಬೇಡ್ಕರ್ ಅವರ ಪಾತ್ರ ದೊಡ್ಡದು, ನಾವುಗಳು ಅವರ ಮಾರ್ಗದರ್ಶನದಂತೆ ನಡೆಯಬೇಕು,ಅಂಬೇಡ್ಕರ್ ಅವರ ಆಶಯಗಳನ್ನು ಯುವ ಪೀಳಿಗೆ ಜೀವನದಲ್ಲಿ ರೂಡಿಸಿಕೊಳ್ಳಬೇಕು ಎಂದರು

ಈ ಸಂದರ್ಭದಲ್ಲಿ ಎಂ, ಸಿ, ಹೂವಪ್ಪ, ಚಂದ್ರು ನೀಡುವಾಳೆ, ರಾಜೇಂದ್ರ ಕಣಚೂರು, ರವಿ ಮಗ್ಗಲಮಕ್ಕಿ, ಸುರೇಂದ್ರ ಹ್ಯಾರಗುಡ್ಡೆ, ಮಂಜುನಾಥ್ ಬೆಟ್ಟಗೆರೆ, ರಮೇಶ್ ಹಂಡಗುಳಿ, ಮಡ್ಡಿಕೆರೆ ಮಂಜುನಾಥ್ ಮನೋಹರ್ ಗೌಡಹಳ್ಳಿ, ಪ್ರಸನ್ನ ಗೌತಹಳ್ಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments