Thursday, October 1, 2026
Homeಗ್ರೇಟರ್ ಬೆಂಗಳೂರುವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ಉರ್ದು ಭಾಷಾ ಹಬ್ಬ ವದಂತಿಗೆ ಬ್ರೇಕ್ ಹಾಕಿದ‌ ಡಿಕೆ ಸರ್ಕಾರ!

ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ಉರ್ದು ಭಾಷಾ ಹಬ್ಬ ವದಂತಿಗೆ ಬ್ರೇಕ್ ಹಾಕಿದ‌ ಡಿಕೆ ಸರ್ಕಾರ!

Telegram Group
Join Now

ಬೆಂಗಳೂರು: ವಿಧಾನಸೌಧದ ಗ್ರ್ಯಾಂಡ್​ಸ್ಟೆಪ್ಸ್ ಮೇಲೆ ಉರ್ದು ಹಬ್ಬ ವಿಚಾರವಾಗಿ ಕನ್ನಡಪರ ಸಂಘಟನೆಗಳು ಮತ್ತು ವಿಪಕ್ಷಗಳಿಂದ ತೀವ್ರ ವಿರೋಧದ ಬೆನ್ನಲ್ಲೇ ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ಉರ್ದು ಭಾಷಾ ಹಬ್ಬ ಆಯೋಜಿಸಲಾಗುತ್ತಿದೆ ಎಂಬ ವರದಿಗಳನ್ನು ಮುಖ್ಯಮಂತ್ರಿಗಳ ಸಚಿವಾಲಯ ಸ್ಪಷ್ಟವಾಗಿ ತಳ್ಳಿಹಾಕಿದೆ.

ಉರ್ದು ಹಬ್ಬವನ್ನು ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ಮಾಡಬೇಕು ಎನ್ನುವುದು ನನ್ನ ವಯಕ್ತಿಕ ಅಭಿಪ್ರಾಯ. ಈ ಬಗ್ಗೆ ಸರ್ಕಾರ ಇನ್ನೂ ನಿರ್ಧಾರ ಮಾಡಿಲ್ಲ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್​​ ಕೂಡ ಹೇಳಿದ್ದಾರೆ.

ಹಿಂದೆ ಟಿಪ್ಪು ಸುಲ್ತಾನ್ ಜಯಂತಿ ಆಚರಣೆಯ ವಿಚಾರವಾಗಿ ತೀವ್ರ ರಾಜಕೀಯ ಸಂಘರ್ಷಕ್ಕೆ ಸಾಕ್ಷಿಯಾಗಿದ್ದ ಕಾಂಗ್ರೆಸ್ ಸರ್ಕಾರ, ಇದೀಗ ವಿಧಾನಸೌಧದ ಮುಂಭಾಗದಲ್ಲೇ ಉರ್ದು ಹಬ್ಬ ಆಚರಿಸಲು ಮುಂದಾಗಿದೆ ಎಂಬ ಮಾತುಗಳು ಕೇಳಿಬಂದ ಬೆನ್ನಲ್ಲೇ ರಾಜ್ಯ ರಾಜಕೀಯದಲ್ಲಿ ಪರ-ವಿರೋಧದ ತೀವ್ರ ಚರ್ಚೆ ಆರಂಭವಾಗಿತ್ತು.

ಆದರೆ ಈ ಕಾರ್ಯಕ್ರಮ ವಿಧಾನಸೌಧದ ಮೆಟ್ಟಿಲುಗಳ ಮೇಲೆ ನಡೆಯಲಿದೆ ಎಂಬ ಊಹಾಪೋಹಗಳಿಗೆ ಇದೀಗ ಸಿಎಂ ಕಚೇರಿ ಅಧಿಕೃತವಾಗಿ ತೆರೆ ಎಳೆದಿದೆ.
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!