ಕೊಪ್ಪ: 66 ಕೆ.ವಿ. ವಿದ್ಯುತ್ ವಿತರಣಾ ಕೇಂದ್ರ ಮತ್ತು 66/11 ಕೆ.ವಿ.ವಿ.ವಿ ಕೇಂದ್ರ ಜೇನುಗದ್ದೆಯಲ್ಲಿ 2024-25 ನೇ ಸಾಲಿನ ನಿರ್ವಹಣೆ ಹಮ್ಮಿಕೊಂಡಿರುವುದರಿಂದ ಹಲವು ಪ್ರದೇಶಗಳಲ್ಲಿ ಬುಧವಾರದಂದು ಒಂದು ದಿನ ವಿದ್ಯುತ್ ನಿಲುಗಡೆ ಆಗಲಿದೆ.

ಹೌದು .. ಮುಗುಳುವಳ್ಳಿ- ಆಲ್ದೂರು- ಜೇನುಗದ್ದೆ- ಬಾಳೆಹೊನ್ನೂರು ಜೋಡಿ ಮಾರ್ಗದುದ್ದಕ್ಕೂ 17 ಸಂಖ್ಯೆ ಮಲ್ಟಿ ಸರ್ಕ್ಯೂಟ್ ಗೋಪುರಗಳನ್ನು ಅಳವಡಿಸುವ ಹಿನ್ನೆಲೆಯಲ್ಲಿ ಕೊಪ್ಪ, ನರಸಿಂಹರಾಜಪುರ, ಶೃಂಗೇರಿ ಮೂರು ತಾಲೂಕಲ್ಲೂ ನಾಳೆ ಬೆಳಗ್ಗೆ 8 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
