Friday, November 20, 2026
Homeಕರ್ನಾಟಕವಾಹನ ಸವಾರರಿಗೆ ಗುಡ್‌ ನ್ಯೂಸ್:‌ PUC ನವೀಕರಣ ಅವಧಿ ವಿಸ್ತರಣೆ

ವಾಹನ ಸವಾರರಿಗೆ ಗುಡ್‌ ನ್ಯೂಸ್:‌ PUC ನವೀಕರಣ ಅವಧಿ ವಿಸ್ತರಣೆ

Telegram Group
Join Now

ಬೆಂಗಳೂರು: ವಾಹನ ಮಾಲೀಕರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದೆ. 6 ವರ್ಷಗಳವರೆಗಿನ ಹೊಸ BS-VI (ಬಿಎಸ್-6) ಖಾಸಗಿ ಕಾರು ಮತ್ತು ಬೈಕ್‌ಗಳ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರದ(PUC) ಅವಧಿಯನ್ನು 3 ವರ್ಷಗಳಿಗೆ ವಿಸ್ತರಿಸಲಾಗಿದೆ. ಆದರೆ ಈ ಸೌಲಭ್ಯ ಹಳೆಯ ವಾಹನಗಳು ಅಥವಾ ವಾಣಿಜ್ಯ ವಾಹನಗಳಿಗೆ ಅನ್ವಯವಾಗುವುದಿಲ್ಲ.

ಕಡಿಮೆ ಹೊಗೆ ಉಗುಳುವ ಹೊಸ ವಾಹನಗಳಿಗೆ ಪದೇ ಪದೇ ಟೆಸ್ಟ್ ಮಾಡಿಸುವ ಕಿರಿಕಿರಿ ತಪ್ಪಿಸಿ, ಹಳೆಯ ವಾಹನಗಳ ಮೇಲೆ ಹೆಚ್ಚಿನ ನಿಗಾ ಇಡಲು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಈ ಹೊಸ ನಿಯಮ ಜಾರಿಗೆ ತಂದಿದೆ. ವಾಹನದ ಮಾಲಿನ್ಯ ಮಾನದಂಡ (BS), ಬಳಕೆಯ ವಿಧ (ಖಾಸಗಿ/ವಾಣಿಜ್ಯ) ಹಾಗೂ ವಾಹನ ಮೊದಲ ಬಾರಿಗೆ ನೋಂದಣಿಯಾದ ದಿನಾಂಕದ ಆಧಾರದ ಮೇಲೆ ಈ ಅವಧಿ ನಿರ್ಧಾರವಾಗುತ್ತದೆ.

ಹಳೆಯ ವಾಹನಗಳು (ಖಾಸಗಿ ಮತ್ತು ವಾಣಿಜ್ಯ):
BS-IV ವಾಹನಗಳಿಗೆ: ಪ್ರತಿ 6 ತಿಂಗಳಿಗೊಮ್ಮೆ
BS-I, BS-II ಮತ್ತು BS-III ವಾಹನಗಳಿಗೆ: ಪ್ರತಿ 3 ತಿಂಗಳಿಗೊಮ್ಮೆ

ವಾಣಿಜ್ಯ BS-VI ವಾಹನಗಳು (ಟ್ಯಾಕ್ಸಿ, ಬಸ್, ಲಾರಿ):
6 ವರ್ಷದೊಳಗಿನ ವಾಹನಗಳಿಗೆ: 2 ವರ್ಷ
6 ರಿಂದ 10 ವರ್ಷದೊಳಗಿನ ವಾಹನಗಳಿಗೆ: 1 ವರ್ಷ
10 ವರ್ಷ ಮೇಲ್ಪಟ್ಟ ವಾಹನಗಳಿಗೆ: 6 ತಿಂಗಳು

ಒಂದೇ ಮಾಡೆಲ್‌ನ ಎರಡು ಕಾರುಗಳಿದ್ದರೂ, ಅವು ಖಾಸಗಿಯೇ ಅಥವಾ ಟ್ಯಾಕ್ಸಿಯೇ ಹಾಗೂ ಯಾವಾಗ ರಿಜಿಸ್ಟರ್ ಆಗಿವೆ ಎಂಬುದರ ಮೇಲೆ PUC ಅವಧಿ ಬದಲಾಗುತ್ತದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!