ನ್ಯಾಯಮೂರ್ತಿ ವಿಕ್ರಮ್ ನಾಥ್ ಮತ್ತು ನ್ಯಾಯಮೂರ್ತಿ ಅಪರೇಶ್ ಸಿಂಗ್ ಅವರಿದ್ದ ಪೀಠ ಈ ಆದೇಶವನ್ನು ನೀಡಿದೆ. ಆದೇಶ ಪ್ರಕಟಿಸುವ ಮೊದಲು ನ್ಯಾಯಮೂರ್ತಿ ನಾಥ್ ಅವರು, ತಮಿಳುನಾಡು ಇಂದು ಮೂರನೇ ಅರ್ಜಿಯನ್ನು ಸಲ್ಲಿಸಿದೆ ಎಂದು ಗಮನಿಸಿ, ಅದನ್ನೂ ಸಹ ವಜಾಗೊಳಿಸಲಾಗುವುದು ಎಂದು ಮೌಖಿಕವಾಗಿ ಹೇಳಿದರು.
ʻಸುಪ್ರೀಂʼ ಆದೇಶದಿಂದ ಕರ್ನಾಟಕಕ್ಕೆ ತುಸು ನಿರಾಳತೆ ಸಿಕ್ಕಂತಾಗಿದೆ. ಈಗಾಗ್ಲೇ ಮಳೆ ಕೊರತೆಯಿಂದ ರಾಜ್ಯದ ಜಲಾಶಯಗಳಲ್ಲಿ ನೀರಿನ ಮಟ್ಟ ಪಾತಾಳಕ್ಕೆ ಕುಸಿದಿದ್ದು, ಕುಡಿಯುವ ನೀರು ಹಾಗೂ ಕೃಷಿ ಬಳಕೆಗೆ ನೀರಿನ ಅಭಾವ ಎದುರಾಗುವ ಆತಂಕವಿದೆ. ಸುಪ್ರೀಂ ಆದೇಶ ಕರ್ನಾಟಕಕ್ಕೆ ಸದ್ಯದ ಮಟ್ಟಿಗೆ ಸಮಾಧಾನ ತಂದಿದೆ.
