Friday, July 17, 2026
Homeಕ್ರೈಮ್ಚಿಕ್ಕಮಗಳೂರು: ಕಾಫಿ ತೋಟದ ಶೆಡ್ ಮೇಲೆ ಪೊಲೀಸರ ದಾಳಿ : ಸುಮಾರು 110 ಕೆಜಿ ಗೋಮಾಂಸ...

ಚಿಕ್ಕಮಗಳೂರು: ಕಾಫಿ ತೋಟದ ಶೆಡ್ ಮೇಲೆ ಪೊಲೀಸರ ದಾಳಿ : ಸುಮಾರು 110 ಕೆಜಿ ಗೋಮಾಂಸ ಜಪ್ತಿ!

Telegram Group
Join Now

ಚಿಕ್ಕಮಗಳೂರು: ತಾಲೂಕಿನ ಸೂರುಗುಪ್ಪೆ ಪ್ರದೇಶದ ಕಾಫಿ ತೋಟದ ಶೆಡ್ ಒಂದರಲ್ಲಿ ಅಕ್ರಮವಾಗಿ ಗೋವುಗಳನ್ನು ಹತ್ಯೆ ಮಾಡಿ ಮಾಂಸವನ್ನು ಪಾಲು ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಚಿಕ್ಕಮಗಳೂರು ಗ್ರಾಮಾಂತರ ಠಾಣೆ ಪೊಲೀಸರು ದಿಢೀರ್ ದಾಳಿ ನಡೆಸಿದ್ದಾರೆ.

ಪೊಲೀಸರು ಸ್ಥಳಕ್ಕೆ ಆಗಮಿಸುತ್ತಿದ್ದಂತೆಯೇ ಅಲ್ಲಿದ್ದ ಆರೋಪಿಗಳು ಅಲ್ಲಿಂದ ತಪ್ಪಿಸಿಕೊಂಡು ಓಡಿಹೋಗಿದ್ದಾರೆ. ದಾಳಿಯ ವೇಳೆ ಸುಮಾರು 110 ಕೆಜಿ ಗೋಮಾಂಸವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಈ ಅಕ್ರಮ ಕೃತ್ಯವು ಮುಕ್ಕಲ್ ಎಂಬುವರಿಗೆ ಸೇರಿದ ಕಾಫಿ ತೋಟದ ಶೆಡ್‌ನಲ್ಲಿ ನಡೆಯುತ್ತಿದೆ ಎಂದು ತಿಳಿದುಬಂದಿದೆ. ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗಾಗಿ ತೀವ್ರ ಹುಡುಕಾಟ ಆರಂಭಿಸಿದ್ದಾರೆ. ಹಾಗೆ ಈ ಸಂಬಂಧ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments