ಚಿಕ್ಕಮಗಳೂರು: ರಾಜ್ಯದಲ್ಲಿ ಮಳೆ ಕೊರತೆಯನ್ನು ಎದುರಿಸುತ್ತಿದೆ. ಅದರಲ್ಲೂ ಈ ಬಾರಿ ಮಲೆನಾಡು ಮತ್ತು ದಕ್ಷಿಣ ಒಳನಾಡಿನಲ್ಲಿ ಮಳೆ ಕೈಕೊಟ್ಟಿದೆ.ಪರಿಣಾಮ ಬಿತ್ತನೆ ಮಾಡಿದ ಬೆಳೆ ತೇವಾಂಶವಿಲ್ಲದೇ ಬಾಡತೊಡಗಿದೆ. ಮಳೆಗಾಗಿ ಕಾದು ಕಾದು ಮುಗಿಲ ಕಡೆ ಮುಖ ಮಾಡಿರುವ ರೈತರು, ಮಳೆರಾಯನ ಕೃಪೆಗಾಗಿ ಪೂಜೆ ಪುನಸ್ಕಾರ ಹೋಮ ಹವನದ ಮೊರೆ ಹೊಕ್ಕಿದ್ದಾರೆ.
ಜಿಲ್ಲೆಯಾದ್ಯಂತ ಪ್ರಸಕ್ತ ಸಾಲಿನಲ್ಲಿ ಬರದ ಛಾಯೆ ತೀವ್ರವಾಗಿ ಆವರಿಸುತ್ತಿರುವ ಹಿನ್ನೆಲೆಯಲ್ಲಿ, ಮಳೆರಾಯನ ಕೃಪೆಗಾಗಿ ಗ್ರಾಮಸ್ಥರೆಲ್ಲರೂ ಸೇರಿ ಕಪ್ಪೆಗಳಿಗೆ ಸಂಪ್ರದಾಯಬದ್ಧವಾಗಿ ಮದುವೆ ಮಾಡಿಸಿ, ಊರಲ್ಲಿ ಮೆರವಣಿಗೆ ನಡೆಸಿ ಬಳಿಕ ಭರ್ಜರಿ ಸಾಮೂಹಿಕ ಬಾಡೂಟ ಸವಿದ ಅಪರೂಪದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ನಿಲೇಗೌಡನ ಕೊಪ್ಪಲು ಗ್ರಾಮದಲ್ಲಿ ನಡೆದಿದೆ.
ಭಾರತೀಯ ಗ್ರಾಮೀಣ ಸಂಸ್ಕೃತಿ ಹಾಗೂ ಜಾನಪದ ನಂಬಿಕೆಗಳಲ್ಲಿ ಮಳೆ ಬಾರದಿದ್ದಾಗ ಕಪ್ಪೆಗಳ ಮದುವೆ ಮಾಡಿಸುವುದು ಶತಮಾನಗಳಿಂದಲೂ ನಡೆದುಬಂದಿರುವ ನಂಬಿಕೆ. ಕಪ್ಪೆಗಳನ್ನು ಜಲಚರ ಹಾಗೂ ಮಳೆಯ ಸಂಕೇತವೆಂದು ಜಾನಪದದಲ್ಲಿ ಪರಿಗಣಿಸಲಾಗುತ್ತದೆ. ಕಪ್ಪೆಗಳು ಗಟ್ಟಿಯಾಗಿ ಶಬ್ದ ಮಾಡಿದರೆ ಮಳೆ ಬರುತ್ತದೆ ಎಂಬ ನಂಬಿಕೆಯಿದೆ. ಕಪ್ಪೆಗಳಿಗೆ ಮದುವೆ ಮಾಡಿಸುವುದರಿಂದ ವರುಣ ದೇವ ಹಾಗೂ ಇಂದ್ರ ದೇವ ಪ್ರಸನ್ನರಾಗಿ ತಕ್ಷಣವೇ ಧರೆಗೆ ಮಳೆ ತರುತ್ತಾರೆ ಎಂಬುದು ಗ್ರಾಮೀಣ ಭಾರತದ ಆಳವಾದ ನಂಬಿಕೆ ಎನ್ನಲಾಗುತ್ತದೆ.
ಕಡೂರು ತಾಲೂಕಿನ ನೀಲೇಗೌಡನ ಕೊಪ್ಪಲು ಗ್ರಾಮದಲ್ಲಿ ಮಳೆರಾಯನನ್ನು ಸಂತೃಪ್ತಿಗೊಳಿಸಲು ದೇವಸ್ಥಾನದಲ್ಲಿ ಕಪ್ಪೆಗಳ ಮದುವೆ ಮಾಡಿಸಿ ಮನೆ ಮನೆಗೂ ತೆರಳಿ ಪೂಜೆ ಮಾಡಿಸಿದ ಸ್ಥಳೀಯರು ಜೋಡಿ ಕಪ್ಪೆಗಳಿಗೆ ಪ್ರತಿ ಮನೆಯಲ್ಲೂ ನೀರು ಹಾಕಿ ಪೂಜೆ ಮಾಡಿದರು. ಮಳೆ ಕೈಕೊಟ್ಟು, ಬರ ಎದುರಾದಾಗ ಕಪ್ಪೆಗಳ ಮದುವೆ ಮಾಡಿಸುವ ಪ್ರತೀತಿ ಇಲ್ಲಿದೆ.
ಕಪ್ಪೆಗಳ ಮದುವೆ ಮಾಡಿಸಿದ 9 ದಿನಗಳ ಒಳಗೆ ಮಳೆ ಸುರಿಯುವ ನಂಬಿಕೆ ಇದೆ. 20 ವರ್ಷಗಳ ಹಿಂದೆಯೂ ಇದೇ ರೀತಿ ಬರ ಎದುರಾಗಿದ್ದ ವೇಳೆ ಕಪ್ಪೆಗಳಿಗೆ ಮದುವೆ ಮಾಡಿಸಿದ್ದ ಗ್ರಾಮಸ್ಥರುಕಪ್ಪೆಗಳ ಮದುವೆ ಮಾಡಿಸಿದ 3 ದಿನದಲ್ಲೇ ಸುರಿದಿದ್ದ ಮಳೆ
ಮಳೆ ಕೈಕೊಟ್ಟು ಬರ ಆವರಿಸಿ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗುವ ಭೀತಿ ಹಿನ್ನೆಲೆ ವಿಶಿಷ್ಟ ಪೂಜೆಗೆ ಮುಂದಾದ ನೀಲೇಗೌಡನಕೊಪ್ಪಲು ಗ್ರಾಮಸ್ಥರು ಪ್ರತಿ ಮನೆಯಿಂದಲೂ ಅಕ್ಕಿ, ಹಿಟ್ಟು ಸಂಗ್ರಹಿಸಿ ಅಡುಗೆ ಮಾಡಿ ನೈವೇದ್ಯ ಪೂಜೆ ಬಳಿಕ ಬಾಡೂಟ ಮಾಡಿ ನೈವೇದ್ಯ ಮಾಡಿ ಮಳೆಗಾಗಿ ಮೊರೆಯಿಟ್ಟ ರೈತರು 9 ದಿನದ ಒಳಗೆ ಮಳೆ ಬರುವ ನಂಬಿಕೆ ಕಟ್ಟಿಕೊಂಡಿರೋ ಸ್ಥಳೀಯರು
