ತೀರ್ಥಹಳ್ಳಿ: ಜಯ ಕರ್ನಾಟಕ ಸಂಘಟನೆಯ ತೀರ್ಥಹಳ್ಳಿ ತಾಲ್ಲೂಕು ಅಧ್ಯಕ್ಷರಾದ ಕುರುವಳ್ಳಿ ನಾಗರಾಜ್ ನೇತೃತ್ವದಲ್ಲಿ ಯುವ ಮುಖಂಡರಾದ ಪ್ರಮೋದ್ ಪೂಜಾರಿ ಅವರ ಗೌರವ ಉಪಸ್ಥಿತಿಯಲ್ಲಿ ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಶ್ರೀ ರತ್ನಾಕರ್ ಶೆಟ್ಟಿ (ದತ್ತಣ್ಣ) ಅವರಿಗೆ ಪಟ್ಟಣ ಪಂಚಾಯಿತಿ ಕಾರ್ಯಾಲಯದಲ್ಲಿ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ಬೆಟ್ಟಮಕ್ಕಿ, ನಗರ ಘಟಕದ ಅಧ್ಯಕ್ಷರಾದ ಮಹೇಶ್ ಬೆಟ್ಟಮಕ್ಕಿ, ಕಾರ್ತಿಕ್ ಗೌಡ ಹೆಗ್ಗಬೈಲು, ಖಜಾಂಚಿಗಳಾದ ಮೇಗರವಳ್ಳಿ ಅರ್ಜುನ್ ಗೌಡ ಹಾಗೂ ಮಾಳೂರು ಗಿರೀಶ್, ಕುರುವಳ್ಳಿ ರಾಮು, ಕೋಳಿಕಲ್ ಗುಡ್ಡ ರಂಜು ಶೆಟ್ಟಿ, ಪ್ರಕಾಶ್ ಗೌಡ ಕುರುವಳ್ಳಿ, ಮನು ಶೆಟ್ಟಿ ಕುರುವಳ್ಳಿ, ಜಾವೀದ್ ಬಡ್ಡ ಸೀಬಿನಕೆರೆ, ವಿನಯ್ ಯಡೂರು, ಗೌತಮ್ ಅಗ್ರಹಾರ ಹಾಗೂ ಅರುಣ್ ಕುರುವಳ್ಳಿ ಉಪಸ್ಥಿತರಿದ್ದರು.
ಸಂಘಟನೆಯ ವತಿಯಿಂದ ಸಲ್ಲಿಸಲಾದ ಮನವಿಯನ್ನು ಪುರಸ್ಕರಿಸಿ, ಸಾರ್ವಜನಿಕರ ಹಿತದೃಷ್ಟಿಯಿಂದ ಸಂಬಂಧಪಟ್ಟ ಬೇಡಿಕೆಯನ್ನು ಈಡೇರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಪಟ್ಟಣ ಪಂಚಾಯಿತಿ ಅಧ್ಯಕ್ಷರಲ್ಲಿ ಮನವಿ ಮಾಡಲಾಯಿತು
