Friday, October 9, 2026
Homeಜಿಲ್ಲಾಸುದ್ದಿಅಕ್ರಮ ಭೂಮಿ ಒತ್ತುವರಿಯಲ್ಲಿ ಕೈ ಪಕ್ಷದ ಹೋಬಳಿ ಅಧ್ಯಕ್ಷನ ಕೈವಾಡ: ಒಂದೇ ಗ್ರಾಮದ ಎರಡು ಗುಂಪುಗಳ...

ಅಕ್ರಮ ಭೂಮಿ ಒತ್ತುವರಿಯಲ್ಲಿ ಕೈ ಪಕ್ಷದ ಹೋಬಳಿ ಅಧ್ಯಕ್ಷನ ಕೈವಾಡ: ಒಂದೇ ಗ್ರಾಮದ ಎರಡು ಗುಂಪುಗಳ ನಡುವೆ ಗಲಾಟೆ

Telegram Group
Join Now

ಮೂಡಿಗೆರೆ: ಅಕ್ರಮ ಭೂಮಿ ಒತ್ತುವರಿಯಲ್ಲಿ ಕೈ ಪಕ್ಷದ ಹೋಬಳಿ ಅಧ್ಯಕ್ಷನ ಕೈವಾಡದ ಆರೋಪ ಹಿನ್ನೆಯಲ್ಲಿ  ಒಂದೇ ಗ್ರಾಮದ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದೆ.

ಹೌದು .. ಮೂಡಿಗೆರೆ ತಾಲೂಕು ಕಚೇರಿ ಆವರಣದಲ್ಲಿ ಹೈಡ್ರಾಮ ನಡೆದಿದ್ದು ಪೊಲೀಸರೊಂದಿಗೆ ಸ್ಥಳೀಯರಿಂದ ಮಾತಿನ ಚಕಮಕಿ ಕೂಡ ನಡೆದಿದೆ.

 

ಬಣಕಲ್ ಹೋಬಳಿ ತ್ರಿಪುರ ಗ್ರಾಮದ ಸರ್ವೇ ನಂಬರ್ 53 ರ ಗೋಮಾಳ ಭೂಮಿ ಗುಳುಂ ಕುರಿತು ಸಾರ್ವಜನಿಕ ವಲಯದಲ್ಲಿ ಹಾಗೂ ಸ್ಥಳೀಯವಾಗಿ ಹಲವು ದೂರುಗಳು ಕೇಳಿಬಂದಿವೆ.  ಗ್ರಾಮಸ್ಥರಿಂದ ಒತ್ತುವರಿ ಭೂಮಿ ತೆರವಿಗೆ ತಹಶೀಲ್ದಾರ್ ಗೆ ಮನವಿ ಮಾಡಿದ್ದರು. ಹಾಗೆ ಎರಡು ದಿನದಲ್ಲಿ ಬೇಲಿ ತೆರವು ಗೊಳಿಸದಿದ್ದರೆ ಕಾನೂನು ಕ್ರಮಕ್ಕೆ ದಂಡಧಿಕಾರಿ ಖಡಕ್ ವಾರ್ನಿಂಗ್ ಕೊಟ್ಟಿದ್ದರು.

ಗ್ರಾಮಸ್ಥರು ಇಲ್ಲದ ಸಮಯವನ್ನು ನೋಡಿಕೊಂಡು ಟ್ರ್ಯಾಕ್ಟರ್‌ ನಿಂದ ಟ್ರಂಚ್‌ ತೆಗೆಯಲಾಗಿದೆ ಹಾಗೆ ಆ ಮಣ್ಣನ್ನು ಮಾರಾಟ ಮಾಡಲಾಗಿದೆ. ರಮೇಶ್‌ ಎಂಬುವರು ರತೀಶ್‌ ಎಂಬುವರ ಜೊತೆ ಸೇರಿಕೊಂಡು ಅಕ್ರಮವಾಗಿ ಈ ಕೆಲಸ ಮಾಡಲಾಗಿದ್ದು ಕೂಡಲೇ ಸ್ಥಳ ಪರಿಶೀಲನೆ ಮಾಡಿ ಜಾಗವನ್ನು ಖುಲ್ಲಾ ಮಾಡಿಸಿ ನಮಗೆ ವಾಪಸ್‌ ಕೊಡಿಸಬೇಕು ಎಂದು ಸ್ಥಳೀಯರು ಆಗ್ರಹಪಡಿಸಿದ್ದಾರೆ.

ವರದಿ:ಪುನೀತ್ ಕಡಿದಾಳು

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!