ಚಿಕ್ಕಮಗಳೂರು: ಏಷ್ಯನ್ ಗೇಮ್ಸ್ 2026ರಲ್ಲಿ ಭಾರತಕ್ಕೆ ಕಂಚಿನ ಪದಕ ತಂದುಕೊಟ್ಟ ಕರ್ನಾಟಕದ ಹೆಮ್ಮೆಯ ಅಥ್ಲೀಟ್ ಸ್ನೇಹಾ ಎಸ್.ಎಸ್., ಅವಧೂತ ವಿನಯ್ ಗುರೂಜಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ.
4×100 ಮೀಟರ್ ಮಿಶ್ರ ರಿಲೇಯಲ್ಲಿ 41.06 ಸೆಕೆಂಡುಗಳಲ್ಲಿ ಓಡಿ ಭಾರತ ಕಂಚಿನ ಪದಕವನ್ನು ತನ್ನದಾಗಿಸಿಕೊಂಡಿತು. ಈ ಐತಿಹಾಸಿಕ ತಂಡದ ಭಾಗವಾಗಿದ್ದ ಕರ್ನಾಟಕದ ಸ್ನೇಹಾ ಗೌಡ ಅವರು, ಅವಧೂತ ಶ್ರೀ ವಿನಯ್ ಗುರುಜಿಯವರ ಸ್ವಗ್ರಾಮದವರು.
*Exclusive Interview*
ತಮ್ಮ ಗುರಿಯತ್ತ ಸಾಗುವ ಪಯಣದಲ್ಲಿ ಗುರುಜಿಯವರು ನೀಡಿದ ಪ್ರೋತ್ಸಾಹ, ಮಾರ್ಗದರ್ಶನ ಹಾಗೂ ವಿವಿಧ ರೀತಿಯ ಸಹಕಾರಕ್ಕೆ ಕೃತಜ್ಞತೆ ಸಲ್ಲಿಸುವ ಸಲುವಾಗಿ, ತಾವು ಗೆದ್ದ ಏಷ್ಯನ್ ಗೇಮ್ಸ್ ಕಂಚಿನ ಪದಕವನ್ನು ಗುರುಜಿಯವರಿಗೆ ಸಮರ್ಪಿಸಿ, ಆಶೀರ್ವಾದ ಪಡೆದರು.
ಸ್ನೇಹಾ ಗೌಡ ಅವರನ್ನು ಆತ್ಮೀಯವಾಗಿ ಅಭಿನಂದಿಸಿದ ಗುರುಜಿಯವರು, ಅವರ ಸಾಧನೆಯನ್ನು ಸಂತೋಷದಿಂದ ಕೊಂಡಾಡಿ, ಅವರನ್ನು ಸನ್ಮಾನಿಸಿ ಆಶೀರ್ವದಿಸಿದರು.
