ಚಿಕ್ಕಮಗಳೂರು: ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಚಿಕ್ಕಲೂರು ಮೀಸಲು ಅರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ನಡೆಸಿದ ಗುಂಡಿನ ದಾಳಿಯಲ್ಲಿ ಮೂವರು ಮೃತಪಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ವನ್ಯಜೀವಿ ಸಂರಕ್ಷಕರಾದ ಜಿ. ವೀರೇಶ್ ಅವರು ಅರಣ್ಯ ಇಲಾಖೆಯ ಪರ ಧ್ವನಿ ಎತ್ತಿದ್ದಾರೆ.
ಬೇಟೆ ಸಂದರ್ಭದಲ್ಲಿ ಜಿಂಕೆ, ಹಂದಿಯನ್ನು ಹೊಡೆದಿದ್ದಾರೆ ಈಗ ಕ್ಯಾಂಪ್ʼಗಳನ್ನ, ಇಲಾಖೆ ಕಚೇರಿಯನ್ನ ನಾಶ ಮಾಡುತ್ತಿದ್ದಾರೆ ಕಾನೂನು ಸುವ್ಯವಸ್ಥೆ ಹಾಳು ಮಾಡುವವರು ನಿಜವಾಗ್ಲೂ ರೈತರಾ? ಎಂದು ಪ್ರಶ್ನೆ ಮಾಡಿದ್ದಾರೆ.
ವ್ಯವಸ್ಥಿತವಾಗಿ ಕಳ್ಳರ ಗ್ಯಾಂಗ್ ಸೇರ್ಕೊಂಡು ಸಂಚು ನಡೆಸ್ತಿದ್ದಾರೆ ಈ ಪ್ರಕರಣಕ್ಕೂ ತಮಿಳುನಾಡಿಗೆ ಏನ್ ಸಂಬಂಧ.? ಜಾತಿ, ಭಾಷೆ ಹೆಸರಲ್ಲಿ ಪರಿಹಾರ ಕೊಡ್ತಿರೋದು ಎಷ್ಟು ಸರಿ.? ಇಷ್ಟೆಲ್ಲಾ ಆದ್ರೂ ರಾಜ್ಯ ಸರ್ಕಾರ ಯಾಕೆ ‘ಕೈ’ ಕಟ್ಟಿ ಕುಳಿತಿದೆ.? ಸಿಬ್ಬಂದಿಗಳ ಪ್ರಾಣ ಹೋಗಿದ್ರೆ ಯಾರಿಗೆ ನಷ್ಟ ಆಗ್ತಿತ್ತು.? ಜಿಲೇಟಿನ್, ಡೈನಾಮಿಟ್ ಸಿಗುತ್ತೆ ಅಂದ್ರೆ ರೈತರಾ.? ಭಯೋತ್ಪಾದಕರಾ.? ಎಂದು ರಾಜ್ಯ ಸರ್ಕಾರದ ವಿರುದ್ಧ ವೀರೇಶ್ ಅವರು ಕಿಡಿ ಕಾರಿದ್ದಾರೆ.
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಕಾವೇರಿ ವನ್ಯಜೀವಿ ಧಾಮದಲ್ಲಿ ಆಗಸ್ಟ್ 15, 2026 ರಂದು ನಸುಕಿನ ಜಾವ ಅರಣ್ಯ ಸಿಬ್ಬಂದಿ ನಡೆಸಿದ ಗುಂಡಿನ ಚಕಮಕಿಯಲ್ಲಿ ಮೂವರು ಶಂಕಿತ ಕಳ್ಳಬೇಟೆಗಾರರು ಮೃತಪಟ್ಟಿದ್ದಾರೆ.
