Thursday, July 16, 2026
Homeಜಿಲ್ಲಾಸುದ್ದಿಮೇ 28ಕ್ಕೆ ರೇಣುಕಾ ಜಯಂತಿ ಹಾಗೂ ಬಸವೇಶ್ವರ ಜಯಂತಿ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

ಮೇ 28ಕ್ಕೆ ರೇಣುಕಾ ಜಯಂತಿ ಹಾಗೂ ಬಸವೇಶ್ವರ ಜಯಂತಿ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

Telegram Group
Join Now

ಆಲ್ದೂರು: ಸಮೀಪದ ಹೋಬಳಿ ವೀರಶೈವ ಲಿಂಗಾಯತ ಸಮಾಜದ ವತಿಯಿಂದ ಮೇ 28 ಗುರುವಾರ ಮಧ್ಯಾಹ್ನ 2 ಘಂಟೆಗೆ ಶ್ರೀ ರೇಣುಕಾಚಾರ್ಯ ಜಯಂತಿ, ಜಗಜ್ಯೋತಿ ಬಸವೇಶ್ವರ ಜಯಂತಿ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಬೇರುಗಂಡಿ ಮಠದ ಸಮುದಾಯ ಭವನದಲ್ಲಿ ಸಮಾಜದ ಅಧ್ಯಕ್ಷರಾದ ಕೆ ಎಸ್ ಮಹೇಶ್ ರವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದೆ.

ಶ್ರೀ ಮಠದ ಪೀಠಾ ಧ್ಯಕ್ಷರಾದ ಶ್ರೀ ರೇಣುಕ ಮಹಾಂತ ಶಿವಾಚಾರ್ಯ ಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ,ಮುಖ್ಯ ಅತಿಥಿಗಳಾಗಿ ಆಲ್ದೂರು ಪೊಲೀಸ್ ವೃತ್ತ ನಿರೀಕ್ಷಕರಾದ ಸೋಮೇಗೌಡ್ರು, ಬಿ,ಬಿ, ರೇಣುಕಾಚಾರ್ಯ, ನಾಡ ಪಟೇಲ್ ಎ ಎನ್ ವೀರೇಂದ್ರ ಭಾಗವಹಿಸಲಿದ್ದಾರೆ.

2025=26 ಸಾಲಿನ ೧೦ ಮತ್ತು 12ನೇ ತರಗತಿ ಯಲ್ಲಿ ಶೇಕಡ 80/-ಮೇಲ್ಪಟ್ಟು ಅಂಕಗಳಿಸಿದ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಲಿದೆ.

ಸಂಜೆ 4 ಘಂಟೆಗೆ ಕೆಎಸ್ ಮಹೇಶ್ ರವರ ಅಧ್ಯಕ್ಷತೆಯಲ್ಲಿ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ನಡೆಯಲಿದೆ ಎಂದು ವೀರಶೈವ ಲಿಂಗಾಯತ ಸಮಾಜದ ಪ್ರಧಾನ ಕಾರ್ಯದರ್ಶಿಯಾದ ಹರೀಶ್ ಯಲಗುಡಿಗೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments