ಮಲೆನಾಡು ಎಂದರೆ ಹೊರ ಭಾಗದ ಜನರಿಗೆ ಎಲ್ಲಿಲ್ಲದ ಖುಷಿ. ಇಲ್ಲಿನ ಹಚ್ಚ- ಹಸಿರು, ಧುಮ್ಮಿಕ್ಕಿ ಹರಿಯುವ ಜಲಪಾತಗಳು, ಹಳ್ಳ ತೊರೆಗಳು, ಪ್ರಕೃತಿಯ ಸೊಬಗು..ಇವಕ್ಕೆಲ್ಲ ಮನ ಸೋಲದವರಿಲ್ಲ. ಆದರೆ, ಇಲ್ಲಿರುವ ಜನರು ಮೂಲಭೂತ ಸೌಕರ್ಯಗಳಿಲ್ಲದೇ ನರಕಯಾತನೆ ಅನುಭವಿಸುತ್ತಿದ್ದಾರೆ. ಇಂದಿಗೂ ಕೂಡ ಸರಿಯಾದ ರಸ್ತೆ ವ್ಯವಸ್ಥೆ ಹಾಗೂ ಸೇತುವೆ , ವಾಸಿಸಲು ಸರಿಯಾದ ಮನೆಗಳಿಲ್ಲ. ಇದಕ್ಕೆ ಜಿಲ್ಲೆಯ ಕಳಸ ತಾಲೂಕಿನ ಬಲಿಗೆ ಗ್ರಾಮ ಸಾಕ್ಷಿ.
ಹೌದು .. ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಬಲಿಗೆ ಗ್ರಾಮದ ನೆರೆ ಸಂತ್ರಸ್ತರು ಕನಿಷ್ಟ ಮೂಲ ಸೌಕರ್ಯಗಳಿಂದ ವಂಚಿತವಾಗಿವೆ. 2019ರ ನಂತರವೂ ಶಾಶ್ವತ ಪರಿಹಾರ ಮತ್ತು ಮನೆ ಸಿಗದ ಹಿನ್ನೆಲೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಿಕ್ಕಮಗಳೂರಿನಲ್ಲಿ 2019 ಜಲಸ್ಫೋಟ ಸಂತ್ರಸ್ತರ ಆಕ್ರೋಶ ವ್ಯಕ್ತವಾಗಿದ್ದು 7 ವರ್ಷ ಕಳೆದರೂ ಮನೆ-ಜಮೀನಿಗೆ ಪರಿಹಾರವೇ ಇಲ್ಲ 2019ರಲ್ಲಿ ಸುರಿದ ಮಹಾಮಳೆಗೆ ಮನೆ ,ಜಮೀನು ಕಳೆದುಕೊಂಡಿದ್ದ ಕುಟುಂಬಗಳು ವಾಸಕ್ಕೆ ಯೋಗ್ಯವಲ್ಲದ ಸ್ಥಳವೆಂದು ಗುರುತು ಮಾಡಿರುವ ಜಿಲ್ಲಾಡಳಿತ ಹೀಗಾಗಿ ಕಳಸ ತಾಲೂಕಿನ ಬಲಿಗೆ ಗ್ರಾಮದ 25 ಕುಟುಂಬಗಳು ಅತಂತ್ರವಾಗಿವೆ.
ಮಳೆ ಬಂದ್ರೆ ಗುಡ್ಡದ ಮಣ್ಣು ಮನೆ ಮೇಲೆ ಬೀಳುವ ಆತಂಕ ಹೆಚ್ಚಾಗಿದ್ದು ಮಳೆಗಾಲ ಮತ್ತೆ ಆರಂಭ, ಜೀವ ಭಯದಲ್ಲೇ 25 ಕುಟುಂಬಗಳ ಬದುಕು ಸಾಗಿಸುತ್ತಿದ್ದು ಜನನಾಯಕರು-ಅಧಿಕಾರಿಗಳು ದಿನದೂಡುತ್ತಿದ್ದಾರೆ” ಎಂದು ಕಿಡಿಕಾರುತ್ತಿದ್ದಾರೆ ಸೌಲಭ್ಯ ಕೊಡಿ ಇಲ್ಲ ದಯಾಮರಣಕ್ಕೆ ಅನುಮತಿ ಕೊಡಿ ಎಂದು ಸಂತ್ರಸ್ತರ ಮನವಿ ಮಾಡಿಕೊಳ್ಳುವ ಪರಿಸ್ಥಿತಿ ಬಂದೊದಗಿದೆ.
ಮನೆ ಕಳೆದುಕೊಂಡ ಕುಟುಂಬಗಳ ನರಕಯಾತನೆ ನೋಡಿದರೇ ಎಂತಹವರಿಗಾದ್ರೂ ಕರುಳು ಚುರುಕ್ ಎನಿಸುತ್ತದೆ ಆದರೆ ಜನನಾಯಕರು-ಅಧಿಕಾರಿಗಳಿಗೆ ಇದರ ಬಗ್ಗೆ ಕಿಂಚಿತ್ತೂ ಗಮನಹ ಹರಿಸುತ್ತಿಲ್ಲ ಹಾಗೆ ಸುರಕ್ಷಿತ ಸ್ಥಳಾಂತರಕ್ಕೂ ಸರ್ಕಾರದಿಂದ ಕ್ರಮ ಇಲ್ಲವೆಂದು ಬೇಸರ ವ್ಯಕ್ತಪಡಿಸಿ ಸರ್ಕಾರದ ವಿರುದ್ಧ ಮಲೆನಾಡ ಕುಗ್ರಾಮದ ಜನರ ಆಕ್ರೋಶ
ಪ್ರತಿ ಮಳೆಯೂ ನಮ್ಮಿಗೆ ಸಾವಿನ ಭೀತಿ ಎಂದು ಕಣ್ಣೀರು ಅಧಿಕಾರಿಗಳ ಭರವಸೆ ಮಾತ್ರ, ಪರಿಹಾರ ಶೂನ್ಯ ಎಂದು ಆರೋಪ ಮಳೆ ಶುರುವಾಗುತ್ತಿದ್ದಂತೆ ಆತಂಕದಲ್ಲಿ ಬದುಕುತ್ತಿರುವ ಕುಟುಂಬಗಳು
ಸಂತ್ರಸ್ತರ ಬದುಕಿಗೆ ಶಾಶ್ವತ ಪರಿಹಾರ ಯಾವಾಗ ? ಜಿಲ್ಲಾಡಳಿತ ಹಾಗೂ ಸರ್ಕಾರದ ನಿರ್ಲಕ್ಷ್ಯ ವಿರುದ್ಧ ಗ್ರಾಮಸ್ಥರು ಕಿಡಿ ಕಾರಿದ್ದು ಬದುಕೋಕೆ ಸೌಲಭ್ಯ ಬೇಕು… ಇಲ್ಲ ದಯಾಮರಣ ಬೇಕು ಎಂದು ಅಲ್ಲಿನ ನಿವಾಸಿಗಳು ಪಟ್ಟು ಹಿಡಿದು ಕುಳಿತ್ತಿದ್ದಾರೆ.
ಮಲೆನಾಡು ಭಾಗದಲ್ಲಿ ಅದೆಷ್ಟೋ ಕುಗ್ರಾಮಗಳಿವೆ. ಇಂದಿಗೂ ಕೂಡ ಆ ಗ್ರಾಮಗಳು ಮೂಲ ಸಮಸ್ಯೆಗಳಿಂದ ಬಳಲುತ್ತಿವೆ. ಇಂತಹ ಕುಗ್ರಾಮಗಳ ಸಮಸ್ಯೆ ಪರಿಹರಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
