Tuesday, June 9, 2026
Homeಕ್ರೈಮ್Wild Elephant: ಆಲ್ದೂರಲ್ಲಿ ರಾತ್ರೋರಾತ್ರಿ ಪಟ್ಟಣಕ್ಕೆ ನುಗ್ಗಿದ ಕಾಡಾನೆಗಳು: ಸರ್ಕಾರಿ ಕಾಲೇಜು, ಮನೆ ಅಂಗಳಕ್ಕೆ ನುಗ್ಗಲು...

Wild Elephant: ಆಲ್ದೂರಲ್ಲಿ ರಾತ್ರೋರಾತ್ರಿ ಪಟ್ಟಣಕ್ಕೆ ನುಗ್ಗಿದ ಕಾಡಾನೆಗಳು: ಸರ್ಕಾರಿ ಕಾಲೇಜು, ಮನೆ ಅಂಗಳಕ್ಕೆ ನುಗ್ಗಲು ಯತ್ನ!

ಚಿಕ್ಕಮಗಳೂರು: ಕಾಫಿನಾಡಲ್ಲಿ ಕಾಡಾನೆಗಳ ಹಾವಳಿ  ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಅಕ್ಷರಶಃ ಮಲೆನಾಡಿಗರ ನೆಮ್ಮದಿ ಕೆಡಿಸಿದೆ.ಮನೆ ಬಾಗಿಲಿಗೆ ಬರುತ್ತಿರುವುದರಿಂದ ಹಳ್ಳಿಗರು ನಿತ್ಯ ಆತಂಕದಲ್ಲಿ ಬದುಕುವಂತಾಗಿದೆ.

ಹೌದು .. ಚಿಕ್ಕಮಗಳೂರು ತಾಲೂಕಿನ ತಾಲೂಕಿನ ಆಲ್ದೂರು ಪಟ್ಟಣದಲ್ಲಿ ಎರಡು ಕಾಡಾನೆಗಳು ಇಡೀ ರಾತ್ರಿ ಓಡಾಟ ನಡೆಸಿ ಜನರ ನಿದ್ದೆಗೆಡಿಸಿದ ಘಟನೆ ನಡೆದಿದೆ.ಇದರಿಂದಾಗಿ ಪಟ್ಟಣದ ನಿವಾಸಿಗಳು ತೀವ್ರ ಆತಂಕಕ್ಕೊಳಗಾಗಿರುವ ದೃಶ್ಯ ಸಿಸಿಟಿಯಲ್ಲಿ ನಾವು ಕಾಣಬಹುದು.

ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಗೇಟ್ ಮುರಿದು ಒಳ ನುಗ್ಗಿದ ಕಾಡಾನೆಗಳು, ಬಳಿಕ ಹಲವು ಮನೆಗಳ ಗೇಟ್‌ಗಳನ್ನು ಧ್ವಂಸಗೊಳಿಸಿ ಅಂಗಳಕ್ಕೆ ನುಗ್ಗಲು ಯತ್ನಿಸಿವೆ. ಕಾಡಾನೆಗಳ ಅಬ್ಬರ ಮತ್ತು ಓಡಾಟದಿಂದಾಗಿ ಆಲ್ದೂರು ಗ್ರಾಮಸ್ಥರು ಭಯಭೀತರಾಗಿ ಇಡೀ ರಾತ್ರಿ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಜಾಗರಣೆ ಮಾಡುವಂತಾಯಿತು.

ಆನೆಗಳ ಹಾವಳಿಯ ಕುರಿತು ಸ್ಥಳೀಯರು ತಕ್ಷಣವೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಮಧ್ಯರಾತ್ರಿಯೇ ಕಾರ್ಯಾಚರಣೆಗೆ ಇಳಿದ ಆಲ್ದೂರು ಅರಣ್ಯ ಸಿಬ್ಬಂದಿಗಳು ಸತತ ಪರಿಶ್ರಮದ ನಂತರ ಕಾಡಾನೆಗಳನ್ನು ಮರಳಿ ಕಾಡಿಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

ಮಲೆನಾಡಿಗರು ಈಗ ಮನೆಯಿಂದ ಹೊರಬರಲು ನೂರು ಬಾರಿ ಯೋಚಿಸುತ್ತಿದ್ದಾರೆ.ಅಕ್ಷರಶಃ ಜನರನ್ನು ಕಂಗೆಡಿಸಿದೆ. ಅರಣ್ಯ ಇಲಾಖೆ ಏನು ಮಾಡುತ್ತಿದೆ? ಈ ಗಜಪಡೆಯಿಂದ ಮಲೆನಾಡಿಗರಿಗೆ ಮುಕ್ತಿ ಸಿಗುವುದೇ? ಎನ್ನುವ ಪ್ರಶ್ನೆಗಳು ಈಗ  ಕೇಳಿಬರುತ್ತಿವೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!