ಚಿಕ್ಕಮಗಳೂರು : ಜಿಲ್ಲಾಸ್ಪತ್ರೆಯಲ್ಲಿ ಅಧಿಕಾರಿಗಳ ಬೇಜವಾಬ್ದಾರಿಗೆ ಬಡ ರೋಗಿಗಳು ನರಳಿ ಸಾಯುವಂತಹ ಸ್ಥಿತಿ ನಿರ್ಮಾಣವಾಗಿದೆ. ನಗರ ಹಾಗೂ ಗ್ರಾಮಾಂತರ ಭಾಗದ ಜನರಿಗೆ ಆಸರೆಯಾಗಬೇಕಿದ್ದ 400 ಹಾಸಿಗೆಗಳ ಈ ಆಸ್ಪತ್ರೆಯಲ್ಲಿ ತುರ್ತು ನಿಗಾ ಘಟಕದ (ICU) ವ್ಯವಸ್ಥೆಯೇ ಹಳ್ಳ ಹಿಡಿದಿದೆ.
*Exclusive Interview*
ಕೋವಿಡ್ ಸಮಯದಲ್ಲಿ ಲಕ್ಷಾಂತರ ರೂಪಾಯಿ ಸಾರ್ವಜನಿಕರ ತೆರಿಗೆ ಹಣದಲ್ಲಿ ಖರೀದಿಸಲಾಗಿದ್ದ ಬರೋಬ್ಬರಿ 28ಕ್ಕೂ ಹೆಚ್ಚು ವೆಂಟಿಲೇಟರ್ಗಳು ಸಣ್ಣಪುಟ್ಟ ರಿಪೇರಿ ಕಾಣದೆ ಕೊಠಡಿಯೊಂದರಲ್ಲಿ ಅನಾಥವಾಗಿ ಬಿದ್ದಿವೆ.
ಕೇವಲ ಒಂದು ಸಣ್ಣ ದುರಸ್ತಿ ಮಾಡಿಸಿದರೆ ನೂರಾರು ಜೀವ ಉಳಿಸಬಹುದಾಗಿದ್ದ ಈ ಯಂತ್ರಗಳನ್ನು ಅಧಿಕಾರಿಗಳು ನಿರ್ಲಕ್ಷ್ಯದಿಂದ ಮೂಲೆಯಲ್ಲಿ ಎಸೆದಿದ್ದಾರೆ.
